ತುಮಕೂರು: ಶಿರಾ ವಿಧಾನಸಭೆ ಉಪಚುನಾವಣೆ ಪ್ರಚಾರಕಾರ್ಯ ರಂಗೇರುತ್ತಿದ್ದು, ನಿನ್ನೆಯಿಂದ ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿರೋ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಅಲ್ಲಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸುತ್ತಿದ್ದಾರೆ.
ರಂಗೇರಿದ ಶಿರಾ ಉಪಚುನಾವಣೆ ಪ್ರಚಾರ : ಹೆಚ್ಡಿಕೆಗೆ ಕುರಿಮರಿ ನೀಡಿದ ರೈತರು - ಶಿರಾ ಉಪಚುನಾವಣೆ
ಶಿರಾ ವಿಧಾನಸಭೆ ಉಪಚುನಾವಣೆ ಪ್ರಚಾರ ರಂಗೇರಿದ್ದು, ಇಂದು ಬರಗೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್ ಸಮಾವೇಶ ನಡೆಸಿದರು.
![ರಂಗೇರಿದ ಶಿರಾ ಉಪಚುನಾವಣೆ ಪ್ರಚಾರ : ಹೆಚ್ಡಿಕೆಗೆ ಕುರಿಮರಿ ನೀಡಿದ ರೈತರು HD Kumaraswamy](https://etvbharatimages.akamaized.net/etvbharat/prod-images/768-512-9275026-thumbnail-3x2-chaii.jpg)
ಇಂದು ಬರಗೂರಿನಲ್ಲಿ ಜೆಡಿಎಸ್ ಸಮಾವೇಶ ನಡೆಸಿದರು. ಅಲ್ಲದೆ ಜೆಡಿಎಸ್ ಕಾರ್ಯಕರ್ತರು ಪಟ್ಟನಾಯಕನಹಳ್ಳಿ ಸರ್ಕಲ್ ನಿಂದ ಬರಗೂರಿನವರೆಗೂ ಬೈಕ್ ರ್ಯಾಲಿ ನಡೆಸಿದರು. ಬರಗೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದರು.
ಹೆಚ್ಡಿಕೆಗೆ ಕುರಿಮರಿ ನೀಡಿದ ರೈತರು:ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಲಮನ್ನಾ ಫಲಾನುಭವಿ ರೈತರು ಇದೀಗ ಹೆಚ್ಡಿಕೆಗೆ ಕುರಿಯನ್ನು ದೇಣಿಗೆಯಾಗಿ ನೀಡಿ ಸಂತಸಪಟ್ಟಿದ್ದಾರೆ. ಇನ್ನು ಮಹಿಳೆಯರು ರಾಗಿ ತೆನೆ ಹಾಗೂ ನೆಲಗಡಲೆ ಕೊಟ್ಟು ಕುಮಾರಸ್ವಾಮಿಯವರನ್ನು ಗ್ರಾಮಗಳಿಗೆ ಬರ ಮಾಡಿಕೊಳ್ಳುತ್ತಿದ್ದಾರೆ.