ತುಮಕೂರು:ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ವಿಜಯದಶಮಿಯ ಇಂದು ಸಹ ಕ್ಷೇತ್ರದಲ್ಲಿ ಬಿರುಸಿನ ಮತ ಭೇಟೆ ನಡೆಸಿದರು.
ಶಿರಾ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರರಿಂದ ಬಿರುಸಿನ ಪ್ರಚಾರ - Congress candidate campaign Tumakuru
ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ವಿಜಯದಶಮಿಯ ಇಂದು ಸಹ ಕ್ಷೇತ್ರದಲ್ಲಿ ಬಿರುಸಿನ ಮತ ಭೇಟೆ ನಡೆಸಿದರು.
ಶಿರಾ ವಿಧಾನಸಭಾ ಕ್ಷೇತ್ರದ ಚಿಕ್ಕಗೂಳ ಗ್ರಾಮದಲ್ಲಿ ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ಥಳೀಯ ಮುಖಂಡರನ್ನು ಬರಮಾಡಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಯಾವುದೇ ಕಾಂಗ್ರೆಸ್ ಮುಖಂಡರು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ, ಟಿಬಿ ಜಯಚಂದ್ರ ಅವರ ಕುಟುಂಬದವರು ಮತ ಪ್ರಚಾರ ನಡೆಸಿದರು.
ಇನ್ನು ಜೆಡಿಎಸ್ ಪಕ್ಷದಿಂದ ದಿನೇದಿನೆ ಒಂದಿಲ್ಲೊಂದು ಕಡೆ ಸ್ಥಳೀಯ ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ನ ಹೆಚ್.ಡಿ ಕುಮಾರಸ್ವಾಮಿ ಹಾಗೂ ಹೆಚ್.ಡಿ ದೇವೇಗೌಡ ನಿರಂತರವಾಗಿ ಪ್ರಚಾರದಲ್ಲಿ ತೊಡಗಿದ್ದರೆ ಇನ್ನೊಂದೆಡೆ ಈ ಪಕ್ಷಾಂತರ ಪರ್ವ ಜೆಡಿಎಸ್ ಮುಖಂಡರಲ್ಲಿ ಒಂದು ರೀತಿಯ ತಳಮಳ ತರಿಸಿದೆ.