ಕರ್ನಾಟಕ

karnataka

ETV Bharat / state

ಶಿರಾದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ... ರಾಜೇಶ್ ಗೌಡ ಭರ್ಜರಿ ಗೆಲುವು - BJP candidate Dr. Rajesh Gowda win

ಶಿರಾ ಉಪ ಚುನಾವಣೆಯಲ್ಲಿ ಕಮಲ ಅರಳಿದ. ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಜಯ ಸಾಧಿಸಿದ್ದು, ಕಾಂಗ್ರೆಸ್, ಜೆಡಿಎಸ್​ ಮುಖಭಂಗ ಅನುಭವಿಸಿದೆ.

shira-by-election-bjp-candidate-dr-rajesh-gowda-wins
ಶಿರಾ ಉಪ ಚುನಾವಣೆ: ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಗೆಲುವು

By

Published : Nov 10, 2020, 5:18 PM IST

Updated : Nov 10, 2020, 9:58 PM IST

ತುಮಕೂರು: ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಗೆಲುವು ಸಾಧಿಸುವ ಮೂಲಕ ಶಿರಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಶಿರಾದಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ... ರಾಜೇಶ್ ಗೌಡ ಭರ್ಜರಿ ಗೆಲುವು

ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ 76,564 ಮತಗಳನ್ನು ಗಳಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್​​ನ ಟಿಬಿ ಜಯಚಂದ್ರ 63150 ಮತಗಳನ್ನು ಪಡೆದಿದ್ದಾರೆ. ಈ ಮೂಲಕ 13,414 ಮತಗಳ ಅಂತರದಿಂದ ರಾಜೇಶ್ ಗೌಡ ವಿಜಯಿಯಾಗಿದ್ದಾರೆ. ಇನ್ನು ಜೆಡಿಎಸ್​​ನ ಅಮ್ಮಾಜಮ್ಮ 36783 ಮತಗಳನ್ನು ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ ರಾಜೇಶ್ ಗೌಡ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ 74,522 ಮತಗಳನ್ನು, ಕಾಂಗ್ರೆಸ್​​ನ ಟಿಬಿ ಜಯಚಂದ್ರ 61,573 ಮತ, ಜೆಡಿಎಸ್​​ನ ಅಮ್ಮಾಜಮ್ಮ 35,982 ಮತಗಳನ್ನು ಪಡೆದಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ 2042 ಅಂಚೆ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ 1577 ಮತಗಳನ್ನು ಜೆಡಿಎಸ್ ನ ಅಮ್ಮಾಜಮ್ಮ 801 ಮತಗಳನ್ನು ಪಡೆದಿದ್ದಾರೆ.

ಒಟ್ಟು 1,82,239 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 4644 ಅಂಚೆ ಮತಗಳು ಚಲಾವಣೆ ಯಾಗಿದ್ದವು. ಬಿಜೆಪಿ ಅಭ್ಯರ್ಥಿ ಶೇ. 42.01 ಮತ, ಕಾಂಗ್ರೆಸ್ ಅಭ್ಯರ್ಥಿ ಶೇ. 34.65, ಜೆಡಿಎಸ್ ಅಭ್ಯರ್ಥಿ 20.18 ಶೇಕಡವಾರು ಮತ ಗಳಿಸಿದ್ದಾರೆ.

Last Updated : Nov 10, 2020, 9:58 PM IST

ABOUT THE AUTHOR

...view details