ತುಮಕೂರು:ಯಾವುದೇ ದಾಖಲೆ ಇಲ್ಲದ 64,40,000 ರೂ. ಹಣವನ್ನು ಸಂಜೆ ಕಳ್ಳಂಬೆಳ್ಳ ಚೆಕ್ ಪೋಸ್ಟ್ ನಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಾ ಉಪಕದನ: ದಾಖಲೆ ರಹಿತ 64.40 ಲಕ್ಷ ರೂ. ಹಣ ಪತ್ತೆ - ಆದಾಯ ತೆರಿಗೆ ನೋಡಲ್ ಅಧಿಕಾರಿ
ಬೆಂಗಳೂರಿನಿಂದ ಚನ್ನಗಿರಿಗೆ ತೆರಳುತ್ತಿದ್ದ ಖಾಸಗಿ ವಾಹನದಲ್ಲಿ ಹಣ ಪತ್ತೆಯಾಗಿದೆ. ಆದರೆ, ಯಾವುದೇ ರೀತಿಯ ಚುನಾವಣಾ ಪ್ರಚಾರ ಸಾಮಗ್ರಿಗಳು ಪತ್ತೆಯಾಗಿಲ್ಲ. ಹಣ ಪತ್ತೆಯಾದ ತಕ್ಷಣ ಆದಾಯ ತೆರಿಗೆ ನೋಡಲ್ ಅಧಿಕಾರಿಗೆ ಕೊಡಲಾಗಿದ್ದು, ಅದನ್ನು ಜಿಲ್ಲಾ ಖಜಾನೆಗೆ ತೆಗೆದುಕೊಂಡು ಹೋಗಲಾಗಿದೆ.

ಶಿರಾ ಉಪಕದನ: ದಾಖಲೆ ರಹಿತ 64.40 ಲಕ್ಷ ರೂ. ಹಣ ಪತ್ತೆ

ಈ ಸಂದರ್ಭದಲ್ಲಿ ಶಿರಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಕೆ.ನಂದಿನಿ ದೇವಿ, ಸಹಾಯಕ ಚುನಾವಣಾಧಿಕಾರಿ ಮಮತಾ, ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕ ಮೃತ್ಯುಂಜಯ ಸೇನಿ ಸೇರಿದಂತೆ ಚೆಕ್ ಪೋಸ್ಟ್ ಸಿಬ್ಬಂದಿ ಹಾಜರಿದ್ದರು.
Last Updated : Oct 28, 2020, 10:41 PM IST