ತುಮಕೂರು: ಜಿಲ್ಲೆಯಲ್ಲಿ ಹೆಚ್ಚಿನ ಜನರು ಮೇಕೆ ಹಾಗೂ ಕುರಿಗಳ ಸಾಕಾಣಿಕೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಆದ್ರೆ, ವಿವಿಧ ಕಾಯಿಲೆಗಳಿಂದಾಗಿ ಸಾವನ್ನಪ್ಪುತ್ತಿರುವ ಕುರಿಗಳನ್ನು ಕಂಡು ಕುರಿಗಾಹಿಗಳಿಗೆ ದಿಕ್ಕೇ ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಪಿಪಿಆರ್ (ಹೀರೇಬೇನೆ) ರೋಗದಿಂದ ಕುರಿಗಳು ಸಾವನ್ನಪ್ಪುತ್ತಿರುವುದಾಗಿ ದೃಢಪಟ್ಟಿದೆ. ಜಿಲ್ಲೆಯ ಪಾವಗಡ, ಶಿರಾ, ಚಿಕ್ಕನಾಯಕನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಕುರಿಗಳು ರೋಗಬಾಧೆಯಿಂದ ಬಳಲುತ್ತಿವೆ. ಇನ್ನು, ರೋಗ ಬಾಧೆಯಿಂದ ಬಳಲುತ್ತಿರುವ ಕುರಿಗಳನ್ನು ಉಳಿಸಿಕೊಳ್ಳಲು ಕುರಿಗಾಯಿಗಳು ಹರಸಾಹಸ ಪಡುತ್ತಿದ್ದಾರೆ. ಸೂಕ್ತ ಮಾಹಿತಿ ಹಾಗೂ ಸಲಹೆ ಇಲ್ಲದೆ ಕಂಗಾಲಾಗಿದ್ದಾರೆ.
ಈಗಾಗಲೇ ಪಾವಗಡ ತಾಲೂಕಿನ ಸುಜನಾಡು, ಪಾವಗಡ ತಾಲೂಕಿನ ಬ್ರಹ್ಮಸಂದ್ರ, ಗೊಲ್ಲರಹಟ್ಟಿ, ತೋವಿನಕೆರೆ ಸೇರಿ ವಿವಿಧೆಡೆಯಿಂದ ರೋಗದಿಂದ ಬಳಲುತ್ತಿದ್ದ ಕುರಿಗಳ ಮಾಹಿತಿಯನ್ನು ಪಶುಪಾಲನಾ ಇಲಾಖೆ ಸಂಗ್ರಹಿಸಿದೆ.