ಕರ್ನಾಟಕ

karnataka

ETV Bharat / state

ರೇವಣ್ಣ ಹೆಸರಲ್ಲಿ ನಿಂಬೆಹಣ್ಣು ಮಾರಾಟ... 10 ರೂ. ಗೆ ಮೂರು, ವಿಡಿಯೋ ಸಖತ್​ ವೈರಲ್​ - ರೇವಣ್ಣ, ನಿಂಬೆಹಣ್ಣು,ಮೂರು, ವಿಡಿಯೋ ,ಸಖತ್,​ ವೈರಲ್​ ,

ವಾಟ್ಸ್ ಅಪ್​ಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ರೇವಣ್ಣನ ನಿಂಬೆ ಹಣ್ಣು, 10ರೂ. ಗೆ ಮೂರು ಎಂದು ವ್ಯಾಪಾರಿ ಕೂಗುತ್ತಿದ್ದಾರೆ.

ರೇವಣ್ಣ ಹೆಸರಿನ ನಿಂಬೆಹಣ್ಣು ಮಾರಾಟ

By

Published : Apr 6, 2019, 1:22 PM IST

ತುಮಕೂರು: ಯುಗಾದಿ ಹಬ್ಬದ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆದಿದೆ. ಇಲ್ಲಿನ ಮಾರುಕಟ್ಟೆಯೊಂದರಲ್ಲಿ ಸಚಿವ ರೇವಣ್ಣ ಹೆಸರಿನಲ್ಲಿ ವ್ಯಾಪಾರಿಯೊಬ್ಬ ನಿಂಬೆ ಹಣ್ಣು ಮಾರಾಟ ಮಾಡುತ್ತಿರುವ ವೀಡಿಯೋ ಸಖತ್ ವೈರಲ್ ಆಗಿದೆ.

ರೇವಣ್ಣ ಹೆಸರಿನ ನಿಂಬೆಹಣ್ಣು ಮಾರಾಟ

ವಾಟ್ಸ್ ಅಪ್​ಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ರೇವಣ್ಣನ ನಿಂಬೆ ಹಣ್ಣು, 10ರೂ. ಗೆ ಮೂರು ಎಂದು ವ್ಯಾಪಾರಿ ಕೂಗುತ್ತಿದ್ದಾರೆ.

ಇದಕ್ಕೆ ಗ್ರಾಹಕರು ಕೂಡ ನಸುನಕ್ಕು ಮುಂದೆ ಸಾಗುತ್ತಿದ್ದದ್ದು ಸಾಮಾನ್ಯವಾಗಿತ್ತು. ಇತ್ತೀಚಿಗೆ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅರಸೀಕೆರೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ವೇದಿಕೆಗೆ ಬರಮಾಡಿಕೊಳ್ಳುವ ಸಂದರ್ಭದಲ್ಲಿ ಸಚಿವ ಹೆಚ್ ಡಿ ರೇವಣ್ಣ ಅವರ ಕೈಗೆ ನಿಂಬೆಹಣ್ಣು ನೀಡುತ್ತಿದ್ದುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ABOUT THE AUTHOR

...view details