ತುಮಕೂರು: ಜಿಲ್ಲೆಯ ಏಳು ಕಡೆ ತೆರೆಯಲಾಗಿದ್ದ ಖರೀದಿ ಕೇಂದ್ರಗಳಲ್ಲಿ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಲಾಗಿತ್ತು. ಆದರೆ ನಿರೀಕ್ಷೆಯಂತೆ ಹಣ ಪಾವತಿಸಿಲ್ಲ.
ಮುಂಗಾರು ಹಂಗಾಮು ಆರಂಭವಾಗಿದ್ದು, ಬಿತ್ತನೆಗೆ ಪೂರಕವಾಗಿ ಕೈಯಲ್ಲಿ ಹಣವಿಲ್ಲದೆ ರೈತರು ಪರದಾಡುತ್ತಿದ್ದಾರೆ. ಈಗಲಾದರೂ ರಾಗಿಯ ಬಾಕಿ ಹಣ ಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ರಾಗಿ ಮಾರಾಟ ಮಾಡಿ ತಿಂಗಳುಗಳೇ ಕಳೆದರು ಪಾವತಿಯಾಗದ ಬಾಕಿ ಹಣ ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳ ಕೊನೆಯವರೆಗೆ 38,782 ರೈತರಿಂದ ಬೆಂಬಲ ಬೆಲೆಯಡಿ ವಿವಿಧ ಎಪಿಎಂಸಿಯಲ್ಲಿ ರಾಗಿ ಖರೀದಿಸಲಾಗಿದೆ. 84,6471 ಕ್ವಿಂಟಾಲ್ ರಾಗಿಯನ್ನು ಖರೀದಿ ಕೇಂದ್ರಗಳ ಖರೀದಿ ಮಾಡಲಾಗಿದೆ. ಪ್ರತಿ ಖರೀದಿ ಕೇಂದ್ರದಲ್ಲಿ ಕೃಷಿ ಇಲಾಖೆಯಿಂದ ಗುಣಮುಟ್ಟ ಪರಿಶೀಲಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಾರ್ಚ್ 14 ರವರೆಗೆ ಖರೀದಿ ಮಾಡಲಾಗಿದ್ದ 26,182 ರೈತರಿಗೆ ಬೆಂಬಲ ಬೆಲೆಯಡಿ ಹಣ ಪಾವತಿಸಲಾಗಿದೆ. ಇನ್ನೂ 12,600 ರೈತರಿಗೆ ಹಣ ಪಾವತಿಸಬೇಕಾಗಿದೆ.
ರಾಜ್ಯದಲ್ಲಿ ಈ ಬಾರಿ 2,75,000 ರೈತರಿಂದ ಬೆಂಬಲ ಬೆಲೆಯಡಿ ರಾಗಿ, ಜೋಳ ಹಾಗು ಭತ್ತವನ್ನು ಖರೀದಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ರೈತರಿಗೆ ಹಣ ಸಂದಾಯವಾಗಿಲ್ಲ. ಜಿಲ್ಲೆಯಲ್ಲಿ 13,065 ರೈತರಿಗೆ ರಾಗಿಯ ಹಣ ಬಿಡುಗಡೆಯಾಗಿಲ್ಲ. ಗೋಡೌನ್ಗಳಲ್ಲಿ ರಾಗಿ ಸಂಗ್ರಹಿಸಲಾಗಿದ್ದು, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕರಿಗೆ ವಿತರಣೆ ಮಾಡಬೇಕಿದೆ. ರಾಗಿ ಖರೀದಿ ಮಾಡಲಾಗಿರುವ ರೈತರ ಸಂಖ್ಯೆ, ಬಾಕಿ ಉಳಿಸಿಕೊಂಡಿರೋ ಹಣದ ಬಗ್ಗೆಯೇ ಅಧಿಕಾರಿಗಳಿಗೆ ಮಾಹಿತಿ ಇಲ್ಲದಂತಾಗಿದೆ.
ಇದನ್ನೂ ಓದಿ: ವಾಹನ ಸವಾರರ ಜೇಬಿಗೆ ಕತ್ತರಿ: ಪೆಟ್ರೋಲ್ ಲೀ. 35 ಪೈಸೆ, ಡೀಸೆಲ್ ಲೀ. 28 ಪೈಸೆ ಏರಿಕೆ