ಕರ್ನಾಟಕ

karnataka

ETV Bharat / state

ಸಿದ್ಧಗಂಗಾ ಮಠದ ಹೆಸರಲ್ಲಿ ಬರೋರಿಗೆ ಹಣ ಕೊಡಬೇಡಿ : ಆಡಳಿತ ಮಂಡಳಿ ಸೂಚನೆ

ಸಿದ್ಧಗಂಗಾ ಮಠದ ಹೆಸರಲ್ಲಿ ಬರೋರಿಗೆ ಹಣ ಕೊಡಬೇಡಿ, ಸಿದ್ಧಗಂಗಾ ಮಠದಿಂದ ಯಾವುದೇ ವ್ಯಕ್ತಿಗಳನ್ನ ಕಳುಹಿಸಿಲ್ಲ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ಹೇಳಿದ್ದಾರೆ.

s-vishwanathaiah-the-administrator-of-the-siddaganga-math
ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಹೇಳಿಕೆ

By

Published : Mar 12, 2021, 10:01 AM IST

ತುಮಕೂರು : ಸಿದ್ಧಗಂಗಾ ಮಠದ ಹೆಸರು ಹೇಳಿಕೊಂಡು ಹಣ ಕೇಳಲು ಬರುವವರಿಗೆ ಹಣ ಕೊಡಬೇಡಿ, ಹಾಗೆ ಬರುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಎಸ್. ವಿಶ್ವನಾಥಯ್ಯ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, "ನಾವು ಮಠದಿಂದ ಬಂದಿದ್ದೇವೆ, ನಿಮಗೆ ಔಷಧಿ ಕೊಡುತ್ತೇವೆ", "ದಾಸೋಹಕ್ಕೆ ದುಡ್ಡು ಕೇಳಲು ಬಂದಿದ್ದೇವೆ", "ಮಠದ ಅಂಧ ಶಾಲೆಗೆ ವಸ್ತುಗಳನ್ನು ಕೊಡಿಸಲಿಕ್ಕೆ ಹಣ ಕೊಡಿ" ಎಂದು ಕೆಲವರು ಕೇಳುತ್ತಿರುವುದಾಗಿ ಭಕ್ತರು ಮಾಹಿತಿ ನೀಡಿದ್ದಾರೆ ಎಂದರು.

ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಹೇಳಿಕೆ

ಎಸ್ಪಿಯವರಿಂದ ಸಬ್ ಇನ್​ಸ್ಪೆಕ್ಟರ್​ವರೆಗೂ ಎಲ್ಲರ ಬಳಿ ಹಣ ವಸೂಲಿ ಮಾಡಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ. ಇಂತಹ ವ್ಯಕ್ತಿಗಳು ಕಂಡು ಬಂದರೆ ಸಮೀಪದ ಪೊಲೀಸರಿಗೆ ಮಾಹಿತಿ ನೀಡಿ, ಸಿದ್ಧಗಂಗಾ ಮಠದಿಂದ ಯಾವುದೇ ವ್ಯಕ್ತಿಗಳನ್ನು ಕಳುಹಿಸಿಲ್ಲ ಎಂದು ಮಾಹಿತಿ ನೀಡಿದರು.

ಓದಿ : ಅಯ್ಯೋ ದುರ್ವಿಧಿಯೇ.. ಮಕ್ಕಳ ಮೃತದೇಹ ಒಯ್ಯಲು ಹಣವಿಲ್ಲದೇ ವಿಲವಿಲರಾದ ಪೋಷಕರು!

ABOUT THE AUTHOR

...view details