ಕರ್ನಾಟಕ

karnataka

ETV Bharat / state

ಕನಸಾಗಿಯೇ ಉಳಿದ  ರೋಪ್​​ವೇ  ಕಾಮಗಾರಿ... ಪ್ರವಾಸಿಗರ ಆಸೆ ಈಡೇರುವುದು ಯಾವಾಗ ?

ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ವಿಷಯದಲ್ಲಿ ಸದಾ ವಿಘ್ನಗಳು ಎದುರಾಗುತ್ತಿವೆ. ಬೆಟ್ಟಕ್ಕೆ ರೋಪ್ ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬ ಪ್ರಯತ್ನ ವಿಫಲವಾಗುತ್ತಲೇ ಬಂದಿದೆ.

ಮಧುಗಿರಿ ಬೆಟ್ಟ

By

Published : Jun 24, 2019, 12:17 PM IST

ತುಮಕೂರು :ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು ಮಧುಗಿರಿಯ ಏಕಶಿಲಾ ಬೆಟ್ಟ. ಏಷ್ಯಾದಲ್ಲೇ ಏಕಶಿಲಾ ಶಿಖರಗಳಲ್ಲೊಂದಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಪ್ರವಾಸಿಗರಿಗೆ ಅನುಕೂಲವಾಗುವ ರೋಪ್ ವೇ ಅವಳಡಿಕೆಗೆ ತಾಂತ್ರಿಕ ಅಡ್ಡಿ ಎದುರಾಗಿದೆ.

ಜಿಲ್ಲೆಯ ಮಧುಗಿರಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ವಿಷಯದಲ್ಲಿ ಸದಾ ವಿಘ್ನಗಳು ಎದುರಾಗುತ್ತಿವೆ. ಬೆಟ್ಟಕ್ಕೆ ರೋಪ್ ವೇ ಅಳವಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂಬ ಪ್ರಯತ್ನ ವಿಫಲವಾಗುತ್ತಲೇ ಬಂದಿದೆ. ರೋಪ್ ವೇ ನಿರ್ಮಿಸಲು ಸ್ಥಳ ಪೂರಕವಾಗಿಲ್ಲ ಎಂದು ಎರಡು ಬಾರಿ ಪ್ರಸ್ತಾವನೆ ತಿರಸ್ಕಾರಗೊಂಡಿತ್ತು.

ಈ ಹಿಂದೆ ಪರಿಶೀಲಿಸಿದ್ದ ಕೋಲ್ಕತ್ತಾ ಮೂಲದ ತಾಂತ್ರಿಕ ಪರಿಣಿತರ ತಂಡ ಸರಕಾರಕ್ಕೆ ವರದಿ ನೀಡಿತ್ತು. ಮಧುಗಿರಿ ಪಟ್ಟಣದ ನ್ಯಾಯಾಲಯ ಸಂಕೀರ್ಣದ ಸಮೀಪದಿಂದ ಏಕಶಿಲಾ ಬೆಟ್ಟದ ಮೇಲಿನ ನವಿಲು ದೋಣೆವರೆಗೂ ರೋಪ್ ವೇ ಅಳವಡಿಸುವುದು ಸೂಕ್ತವಾದ ಸ್ಥಳವೆಂದು ತಂಡವು ವರದಿ ನೀಡಿತ್ತು.

ಮಧುಗಿರಿ ಬೆಟ್ಟ

ಆದ್ರೆ, ಅದನ್ನು ಕೇಂದ್ರದ ಪುರಾತತ್ವ ಇಲಾಖೆ ತಿರಸ್ಕರಿಸಿದೆ. ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಪೂರಕವಲ್ಲ ಎಂದು ಎರಡು ಬಾರಿ ತಿರಸ್ಕಾರಗೊಂಡಿದೆ. ಪ್ರಸ್ತಾವನೆ ಹಂತದಲ್ಲಿದ್ದು, ಕೇಂದ್ರ ಸರಕಾರ ಮತ್ತು ಕೆಂದ್ರ ಪುರಾತತ್ವ ಇಲಾಖೆ ಅನುಮತಿ ನೀಡಬೇಕಿದೆ.

ಹೆಚ್ಚು ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಅವರಿಂದ ಸಹಾಯ ತೆಗೆದುಕೊಂಡು ರೋಪ್ ಅಳವಡಿಕೆಯ ಯೋಜನೆ ಅನುಷ್ಠಾನದ ಬಗ್ಗೆ ಚಿಂತಿಸಲಾಗುವುದು ಎಂದು ಮಧುಗಿರಿ ಶಾಸಕ ವೀರಭದ್ರಯ್ಯ ತಿಳಿಸಿದ್ದಾರೆ.

ಪ್ರಕೃತಿ ಸೌಂದರ್ಯ ದೊಂದಿಗೆ ಐತಿಹಾಸಿಕ ಗತವೈಭವ ಸಾರುವ ಮದುಗಿರಿ ಬೆಟ್ಟ ಪ್ರವಾಸಿಗರ ಫೇವರಿಟ್ ಪ್ಲೇಸ್ ಆಗಿದೆ. ವೀಕೆಂಡ್ ನಲ್ಲಿ ಇಲ್ಲಿಗೆ ಬಂದು ಬೆಟ್ಟಹತ್ತಿ ಪ್ರಕೃತಿ ಮಡಿಲಲ್ಲಿ ಒಂದಿಷ್ಟು ಸಮಯ ಕಳೆಯುವ ಪ್ರವಾಸಿಗರಿಗೆ ಈ ರೋಪ್ ವೇ ಅನುಕೂಲವಾಗುತ್ತೆ ಅನ್ನೋದು ಇಲ್ಲಿನ ಜನರ ಅಭಿಪ್ರಾಯ.

ABOUT THE AUTHOR

...view details