ತುಮಕೂರು:ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಭರದಿಂದ ಸಾಗುತ್ತಿವೆ. ಇನ್ನು ಜನತಾ ಕರ್ಫ್ಯೂ ನಡುವೆಯೂ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ತುಮಕೂರು ನಗರದಲ್ಲಿ ಕೆಲಕಾಲ ಸುರಿದ ಮಳೆಯ ನಡುವೆಯೂ ರಸ್ತೆಗೆ ಡಾಂಬರೀಕರಣ ಮಾಡಿರುವುದು ಸಾಕಷ್ಟು ಟೀಕೆಗೆ ಒಳಗಾಗಿದೆ.
ಮಳೆ ನಡುವೆಯೂ ತುಮಕೂರು ಸ್ಮಾರ್ಟ್ ಸಿಟಿ ರಸ್ತೆ ಡಾಂಬರೀಕರಣ, ಸಾರ್ವಜನಿಕರ ಆಕ್ರೋಶ - ಸೋಮೇಶ್ವರಪುರಂ ಬಡಾವಣೆಯ 14ನೇ ಕ್ರಾಸ್
ನಗರದ ಸೋಮೇಶ್ವರಪುರಂ ಬಡಾವಣೆಯ 14ನೇ ಕ್ರಾಸ್ ನಲ್ಲಿ ಧೋ ಎಂದು ಮಳೆ ಸುರಿಯುತ್ತಿದ್ದರೂ, ಗುತ್ತಿಗೆದಾರರು ರಸ್ತೆಗೆ ಡಾಂಬರು ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತುಮಕೂರು ಸ್ಮಾರ್ಟ್ ಸಿಟಿ ರಸ್ತೆ ಡಾಂಬರೀಕರಣ
ಓದಿ: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆ: ಬೆಂಗಳೂರಿಗೂ ಗುಡುಗು - ಮಿಂಚು ಸಹಿತ ವರುಣಾಗಮನ
ನಗರದ ಸೋಮೇಶ್ವರಪುರಂ ಬಡಾವಣೆಯ 14ನೇ ಕ್ರಾಸ್ ನಲ್ಲಿ ಧೋ ಎಂದು ಮಳೆ ಸುರಿಯುತ್ತಿದ್ದರೂ, ಗುತ್ತಿಗೆದಾರರು ರಸ್ತೆಗೆ ಡಾಂಬರು ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಸುರಿಯುತ್ತಿದ್ದ ವೇಳೆ ಡಾಂಬರು ಹಾಕಿದ್ದು, ಅದು ಕ್ಷಣಾರ್ಧದಲ್ಲೇ ಸಂಪೂರ್ಣ ಕಿತ್ತು ಹೋಗಿದೆ. ಇಂತಹ ಅವೈಜ್ಞಾನಿಕ ರಸ್ತೆ ಡಾಂಬರೀಕರಣ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಾಗಲಿ ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳು ಗಮನ ಹರಿಸದಿರುವುದು ಕಂಡು ಬಂದಿದೆ.