ತುಮಕೂರು: ರಸ್ತೆ ಗುಂಡಿ ತಪ್ಪಿಸುವ ಸಲುವಾಗಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಕುಳಿತಿದ್ದ ತಾಯಿ ಆಯ ತಪ್ಪಿ ಕೆಳಗೆ ಬಿದ್ದು, ಅವರ ಮೇಲೆ ಲಾರಿ ಹರಿದು ಸಾವಿಗೀಡಾಗಿರುವ ಘಟನೆಜಿಲ್ಲೆಯ ತಿಪಟೂರು ನಗರದ ಬಿ.ಎಚ್ ರಸ್ತೆಯಲ್ಲಿ ನಡೆದಿದೆ.
ರಸ್ತೆ ಗುಂಡಿ ತಪ್ಪಿಸಲು ಬ್ರೇಕ್.. ಮಗಳ ಕಣ್ಮುಂದೆಯೇ ಲಾರಿ ಹರಿದು ತಾಯಿ ಸಾವು - ತಿಪಟೂರು ಲೆಟೆಸ್ಟ್ ನ್ಯೂಸ್
ರಸ್ತೆ ಗುಂಡಿ ತಪ್ಪಿಸುವ ಸಲುವಾಗಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಕುಳಿತಿದ್ದ ತಾಯಿ ಆಯ ತಪ್ಪಿ ಕೆಳಗೆ ಬಿದ್ದು, ಅವರ ಮೇಲೆ ಲಾರಿ ಹರಿದು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ತಿಪಟೂರು ನಗರದ ಬಿ.ಎಚ್ ರಸ್ತೆಯಲ್ಲಿ ನಡೆದಿದೆ.
Road accident, ರಸ್ತೆ ಅಪಘಾತ
ಭಾಗ್ಯಮ್ಮ (45) ಮೃತ ಮಹಿಳೆ. ತಿಪಟೂರು ನಗರದ ಕಲ್ಪತರು ಕಾಲೇಜು ಮುಂಭಾಗದಲ್ಲಿ ಹೋಗುತ್ತಿದ್ದಾಗ ರಸ್ತೆ ಗುಂಡಿಯನ್ನು ತಪ್ಪಿಸಲು ಭಾಗ್ಯಮ್ಮ ಅವರ ಮಗಳು ತಕ್ಷಣ ಬ್ರೇಕ್ ಹಾಕಿದ್ದಾರೆ. ಈ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ಭಾಗ್ಯಮ್ಮ ಆಯಾತಪ್ಪಿ ಕೆಳಗೆ ಬಿದ್ದಿದ್ದು, ಆ ಸಮಯದಲ್ಲಿ ಹಿಂಬದಿಯಿಂದ ಬಂದ ಲಾರಿ ಹರಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.