ಕರ್ನಾಟಕ

karnataka

ETV Bharat / state

ಮದ್ಯದ ಅಮಲಿನಲ್ಲಿ ರಸ್ತೆ ಬದಿ ಅಂಗಡಿಯೊಳಗೆ ಲಾರಿ ನುಗ್ಗಿಸಿದ ಚಾಲಕ - ತುಮಕೂರಿನಲ್ಲಿ ಮದ್ಯದ ಅಮಲಿನಲ್ಲಿ ರಸ್ತೆ ಬದಿ ಅಂಗಡಿಯೊಳಗೆ ಲಾರಿ ನುಗ್ಗಿಸಿದ ಚಾಲಕ

ಮದ್ಯದ ಅಮಲಿನಲ್ಲಿದ್ದ ಚಾಲಕ ಲಾರಿಯನ್ನು ರಸ್ತೆ ಬದಿಯ ಹೆಲ್ಮೆಟ್ ಅಂಗಡಿಯೊಳಕ್ಕೆ ನುಗ್ಗಿಸಿದ್ದಾನೆ.

ರಸ್ತೆ ಬದಿ ಅಂಗಡಿಯೊಳಗೆ ಲಾರಿ ನುಗ್ಗಿಸಿದ ಚಾಲಕ
ರಸ್ತೆ ಬದಿ ಅಂಗಡಿಯೊಳಗೆ ಲಾರಿ ನುಗ್ಗಿಸಿದ ಚಾಲಕ

By

Published : Sep 20, 2021, 4:49 PM IST

ತುಮಕೂರು: ಮದ್ಯ ಸೇವಿಸಿದ ಅಮಲಿನಲ್ಲಿ ಲಾರಿ ಚಾಲಕ ರಸ್ತೆ ಬದಿ ಅಂಗಡಿಯೊಳಗೆ ಲಾರಿ ನುಗ್ಗಿಸಿದ ಘಟನೆ ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿದೆ. ಅದೃಷ್ಟವಶಾತ್, ಕೂದಲೆಳೆ ಅಂತರದಲ್ಲಿ ಅಂಗಡಿ‌ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ‌ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಬೈಪಾಸ್‌ನಲ್ಲಿ ಈ ಘಟನೆ ನಡೆಯಿತು. ತೊಂಡೇಬಾವಿಯಿಂದ ಸಿಮೆಂಟ್ ಬ್ಯಾಗುಗಳನ್ನು ತುಂಬಿಸಿಕೊಂಡು ಬರುತ್ತಿರುವಾಗ ಚಾಲಕ ಲಾರಿಯನ್ನು ಹೆಲ್ಮೆಟ್ ಅಂಗಡಿಯೊಳಕ್ಕೆ ನುಗ್ಗಿಸಿದ್ದಾನೆ.

ರಸ್ತೆ ಬದಿ ನಿಲ್ಲಿಸಲಾಗಿದ್ದ ಬೈಕ್ ಮೇಲೆ ಲಾರಿ ಹರಿದು ಬೈಕ್ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕೊರಟಗೆರೆ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details