ಕರ್ನಾಟಕ

karnataka

ETV Bharat / state

ಸಮುದ್ರ ಸೇರುತ್ತಿರುವ ಅಘನಾಶಿನಿ ನದಿ ನೀರು ಬಳಕೆಗೆ ಯೋಜನೆ: ಮಾಜಿ ಸಚಿವ - undefined

ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಹರಿಯುವ ಅಘನಾಶಿನಿ ನೀರನ್ನು ಬೆಂಗಳೂರು, ತುಮಕೂರು ಜನರಿಗೆ ಉಪಯೋಗಿಸುವ ನಿಟ್ಟಿನಲ್ಲಿ ರೂಪುರೇಷೆ ಸಿದ್ಧವಾಗಿದ್ದು, ಸರ್ಕಾರದ ಜತೆಗೂಡಿ ಯೋಜನೆ ಸಿದ್ಧಪಡಿಸಲಾಗುವುದು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ

By

Published : Jun 25, 2019, 5:43 PM IST

ತುಮಕೂರು:ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯ ಸ್ವರೂಪದಲ್ಲಿ ಅಘನಾಶಿನಿ ನದಿ ನೀರು ಬಳಸಕೊಂಡು ತುಮಕೂರು, ಬೆಂಗಳೂರಿಗೆ ನೀರು ಹರಿಸುವ ಯೋಜನೆ ಸಿದ್ಧವಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಪಶ್ಚಿಮ ಭಾಗದಲ್ಲಿ ಇರುವಂತಹ ನದಿಗಳ ಮೂಲಕ ಸಮುದ್ರಕ್ಕೆ ಸುಮಾರು 2000 ಟಿಎಂಸಿ ನೀರು ಹರಿದು ಹೋಗುತ್ತಿದೆ.

ಅದರಲ್ಲೂ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಹುಟ್ಟಿ ಹರಿಯುವ ಅಘಿನಾಶಿನಿ ನದಿ 1871 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹರಿಯುತ್ತದೆ ಎಂದರು.

ಇಲ್ಲಿ ಮಳೆಗಾಲದಲ್ಲಿ 100ರಿಂದ 121 ಟಿಎಂಸಿ ನೀರು ಉತ್ಪತ್ತಿಯಾಗುತ್ತದೆ. ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಆಗದಂತೆ ಮಳೆ ನೀರನ್ನು ಬಳಸಿಕೊಳ್ಳಬಹುದು. ಅಘಿನಾಶಿನಿ ನದಿಯ ಕನಿಷ್ಠ 50 ಟಿಎಂಸಿ ನೀರನ್ನು ತುಂಗಭದ್ರ ನದಿಯ ಅಚ್ಚುಕಟ್ಟು ಪ್ರದೇಶವನ್ನು ದಾಟಿ ತುಮಕೂರು ಜಿಲ್ಲೆಗೆ ತರುವ ಯೋಜನೆ ಇದೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟಿ ಮೂಡಿಗೆರೆ ಬಳಿಯಿಂದ ತುಮಕೂರು ಜಿಲ್ಲೆಯ ಬೋರನಕಣಿವೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಮೀಪದ ಮೂಲಕ ನೀರನ್ನು ತಿರುಗಿಸಬಹುದು. ಇದರಿಂದ ತುಮಕೂರು ಜಿಲ್ಲೆಯ ಹೆಚ್ಚು ಭಾಗಕ್ಕೆ ನೀರು ಲಭ್ಯವಾಗುತ್ತದೆ. ಮಾರ್ಗ ಮಧ್ಯದ ಕೆರೆಗಳಿಗೂ ನೀರು ತುಂಬಿಸಬಹುದಾಗಿದೆ. ಇದೇ ರೀತಿ ಬೆಂಗಳೂರಿಗೂ ನೀರನ್ನು ಒದಗಿಸುವ ಯೋಜನೆ ಇದೆ.

ಯೋಜನೆ ಕುರಿತಂತೆ ಹಲವು ದಿನಗಳಿಂದ ಸಾಕಷ್ಟು ಅಧ್ಯಯನ ನಡೆಸಿದ್ದೇನೆ. ಸಿದ್ಧಪಡಿಸಿರುವ ರೂಪುರೇಷೆಗಳನ್ನು ಸರ್ಕಾರದ ಗಮನ ಸೆಳೆದು ಕಾರ್ಯರೂಪಕ್ಕೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

For All Latest Updates

TAGGED:

ABOUT THE AUTHOR

...view details