ತುಮಕೂರು: ಜಾನುವಾರು ಮೇಯಿಸಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಜಿಲ್ಲೆಯ ಹಿರೇಹಳ್ಳಿ ಸಮೀಪದ ಗ್ರಾಮವೊಂದರಲ್ಲಿ ಘಟನೆ ಜರುಗಿದೆ.
ದನ ಮೇಯಿಸಲು ಹೋದ ಮಹಿಳೆ ಮೇಲೆ ಅತ್ಯಾಚಾರ, ಕೊಲೆ - tumakuru crime news
35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಗಂಡ ಎಷ್ಟೇ ಹೊತ್ತಾದರೂ ಹೆಂಡತಿ ಮನೆಗೆ ಬಾರದ್ದನ್ನು ಕಂಡು ಹುಡುಕಿಕೊಂಡು ಬೆಟ್ಟದ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ದನ ಮೇಯಿಸಲು ಹೋದ ಮಹಿಳೆ ಮೇಲೆ ಅತ್ಯಾಚಾರ, ಕೊಲೆ
35 ವರ್ಷದ ಮಹಿಳೆ ಸಾವಿಗೀಡಾಗಿದ್ದಾಳೆ. ನಿನ್ನೆ ಬೆಳಗ್ಗೆ ದನ ಮೇಯಿಸಲು ಈಕೆ ತೆರಳಿದ್ದಳು. ಸಂಜೆ 6.45 ಆದರೂ ಕೂಡ ಪತ್ನಿ ಮನೆಗೆ ಬರದಿದ್ದರಿಂದ ಗಂಡ ಹುಡುಕಿಕೊಂಡು ಬೆಟ್ಟದ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಹಿಳೆ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಅತ್ಯಾಚಾರಿಗಳು ಕಿತ್ತುಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ವಿಧಿ ವಿಜ್ಞಾನ ತಂಡ (FSL) ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Aug 25, 2021, 10:43 AM IST