ತುಮಕೂರು: ಶಿರಾ ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆ ಮೊಬೈಲ್ ವೈದ್ಯಕೀಯ ತಂಡಗಳ ಮೂಲಕ ರಸ್ತೆ ಬದಿ ಕಂಡು ಬರುವ ಕೊರೊನಾ ಸೋಂಕಿನ ಗುಣಲಕ್ಷಣವಿರುವ ವ್ಯಕ್ತಿಗಳ ಗಂಟಲು ದ್ರವದ ಸ್ಯಾಂಪಲ್ಗಳನ್ನು ನಿರಂತರವಾಗಿ ತೆಗೆಯಲಾಗುತ್ತಿದೆ.
ಹೆಚ್ಚುತ್ತಿರೋ ಸೋಂಕಿತರ ಸಂಖ್ಯೆ.. ಶಿರಾದಲ್ಲಿ ಮೊಬೈಲ್ ತಂಡದ ಮೂಲಕ ಸ್ವಾಬ್ ಟೆಸ್ಟ್ - ತುಮಕೂರು ಕೊರೊನಾ ಸುದ್ದಿ
ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಶಿರಾ ನಗರದಲ್ಲಿ ಜನರ ಆರೋಗ್ಯದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದರ ಆಧಾರದ ಮೇಲೆ ಗಂಟಲು ದ್ರವದ ಸ್ಯಾಂಪಲ್ಗಳನ್ನು ತೆಗೆಯಲಾಗುತ್ತಿದೆ.

ಶಿರಾದಲ್ಲಿ ಸ್ವಾಬ್ ಟೆಸ್ಟ್
ಕಳೆದ ಮೂರು ದಿನಗಳಿಂದ ಶಿರಾ ನಗರದಲ್ಲಿ ಗಸ್ತು ತಿರುಗುತ್ತಿರುವ ತಂಡವು 205 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪಡೆದಿದೆ. ಮೊದಲ ದಿನ 95, ಎರಡನೇ ದಿನ 50 ಮತ್ತು ಮೂರನೇ ದಿನ 60 ಮಂದಿಯ ಸ್ಯಾಂಪಲ್ ತೆಗೆಯಲಾಗಿದೆ.
ಶಿರಾದಲ್ಲಿ ಮೊಬೈಲ್ ತಂಡಗಳಿಂದ ಸ್ವಾಬ್ ಟೆಸ್ಟ್
ಆಶಾ ಕಾರ್ಯಕರ್ತೆಯರು ಮತ್ತು ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಶಿರಾ ನಗರದಲ್ಲಿ ಜನರ ಆರೋಗ್ಯದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅದರ ಆಧಾರದ ಮೇಲೆ ಗಂಟಲು ದ್ರವದ ಸ್ಯಾಂಪಲ್ಗಳನ್ನು ತೆಗೆಯಲಾಗುತ್ತಿದೆ.