ಕರ್ನಾಟಕ

karnataka

By

Published : Aug 7, 2019, 5:57 PM IST

ETV Bharat / state

ಮುಂಬೈ ಜಲ ಪ್ರಳಯ: ಬಿಕೋ ಎನ್ನುತ್ತಿದೆ ತಿಪಟೂರು ಕೊಬ್ಬರಿ ಮಾರುಕಟ್ಟೆ

ಮುಂಬೈ ಸೇರಿದಂತೆ ಉತ್ತರ ಭಾರತದಲ್ಲಿ ಜಲಪ್ರಳಯದ ನೇರ ಪರಿಣಾಮ ತುಮಕೂರು ಜಿಲ್ಲೆಯ ತಿಪಟೂರು ಕೊಬ್ಬರಿ ಮಾರುಕಟ್ಟೆ ಮೇಲೂ ಬೀರಿದೆ. ಕೊಬ್ಬರಿ ಮಾರಾಟ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಲ್ಲದೆ ಕ್ವಿಂಟಾಲ್ ಕೊಬ್ಬರಿ ಬೆಲೆ ಕೂಡ ಪಾತಾಳಕ್ಕೆ ಕುಸಿದಿದೆ.

ಬಿಕೋ ಎನ್ನುತ್ತಿದೆ ತಿಪಟೂರು ಕೊಬ್ಬರಿ ಮಾರುಕಟ್ಟೆ

ತುಮಕೂರು:ಮುಂಬೈ ಸೇರಿದಂತೆ ಉತ್ತರ ಭಾರತದಲ್ಲಿನ ಜಲಪ್ರಳಯದ ನೇರ ಪರಿಣಾಮ ತುಮಕೂರು ಜಿಲ್ಲೆಯ ಮೇಲೂ ಬೀರಿದೆ. ತಿಪಟೂರು ಕೊಬ್ಬರಿ ಮಾರುಕಟ್ಟೆಗೆ ಮೇಲೆ ಈ ಎಫೆಕ್ಟ್​​ ಬಿದ್ದಿದೆ. ಕೊಬ್ಬರಿ ಮಾರಾಟ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ. ಅಲ್ಲದೆ ಕ್ವಿಂಟಾಲ್ ಕೊಬ್ಬರಿ ಬೆಲೆ ಕೂಡ ಕುಸಿದಿದೆ.

ಬಿಕೋ ಎನ್ನುತ್ತಿದೆ ತಿಪಟೂರು ಕೊಬ್ಬರಿ ಮಾರುಕಟ್ಟೆ

ತಿಪಟೂರು ಮಾರುಕಟ್ಟೆ ರಾಜ್ಯದಲ್ಲಿಯೇ ಪ್ರಮುಖ ಕೊಬ್ಬರಿ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿದೆ. ಪ್ರತಿ ವಾರ ಇಲ್ಲಿಂದ ಅಪಾರ ಪ್ರಮಾಣದಲ್ಲಿ ಮುಂಬೈ ಮಾರುಕಟ್ಟೆಗೆ ಕೊಬ್ಬರಿ ಸರಬರಾಜು ಆಗುತ್ತದೆ. ಆದ್ರೆ 15 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮುಂಬೈ ಮಹಾನಗರ ತತ್ತರಿಸಿ ಹೋಗಿದೆ. ಇದಿರಿಂದದಾಗಿ ಮುಂಬೈ ಮಾರುಕಟ್ಟೆಯಲ್ಲಿಯೂ ವ್ಯಾಪಾರ ಬಹುತೇಕ ಸ್ಥಗಿತಗೊಂಡಿದೆ.

ವ್ಯಾಪಾರಿಗಳು ಕೊಬ್ಬರಿ ಖರೀದಿಗೆ ತಿಪಟೂರು ಮಾರುಕಟ್ಟೆಯತ್ತ ತಲೆ ಹಾಕಿಲ್ಲ. ಹೀಗಾಗಿ ಕೊಬ್ಬರಿ ಬೇಡಿಕೆ ಕೂಡ ಸಹಜವಾಗಿ ಕ್ಷೀಣಿಸಿದೆ. ತಿಪಟೂರು ಮಾರುಕಟ್ಟೆ ನಿತ್ಯ 7 ರಿಂದ 8 ಸಾವಿರ ಚೀಲ ಕೊಬ್ಬರಿ ಮಾರುಕಟ್ಟೆಗೆ ಆವಕವಾಗುತ್ತದೆ. ಅದ್ರಲ್ಲಿ ಬಹುತೇಕ ಕೊಬ್ಬರಿ ವರ್ಷವಿಡೀ ಮುಂಬೈ ಮಾರುಕಟ್ಟೆಯಲ್ಲಿ ಬಿಕರಿಯಾಗಲಿದೆ.

ಉತ್ತರ ಭಾರತದಲ್ಲಿ ರಕ್ಷಾ ಬಂಧನ ಹಬ್ಬದ ಹಿನ್ನೆಲೆ ಸಾಕಷ್ಟು ಪ್ರಮಾಣದಲ್ಲಿ ಕೊಬ್ಬರಿ ಹೋಗುತ್ತಿತ್ತು. ಆದ್ರೆ ವ್ಯಾಪಕ ಮಳೆಯಾಗುತ್ತಿದ್ದು, ಅದ್ರಲ್ಲೂ ಮುಖ್ಯ ಮಾರುಕಟ್ಟೆ ಮುಂಬೈಯಿಂದ ಬೇಡಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಸಹಜವಾಗಿ ಕೊಬ್ಬರಿ ಬೆಲೆ ಕುಸಿದಿದೆ. ಅಲ್ಲದೆ ಪ್ರಸ್ತುತ ಕೊಬ್ಬರಿ ಕ್ವಿಂಟಾಲ್ 13,550 ರೂ. ಗೆ ಬಿಕರಿಯಾಗುತ್ತಿದೆ. 14,100 ರೂ.ಗೆ ಶನಿವಾರ ಮಾರಾಟವಾಗಿತ್ತು. ಆದ್ರೆ ಕಳೆದ ವರ್ಷ ಇದೇ ವೇಳೆ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ಪ್ರತಿ ಕ್ವಿಂಟಾಲ್ ಗೆ 16,000 ರೂ. ಬೆಲೆ ಇತ್ತು.

ಉತ್ತರ ಭಾರತ ಮತ್ತು ಮುಂಬೈನಲ್ಲಿ ಮಳೆ ಪ್ರಮಾಣ ಕಡಿಮೆಯಾದ್ರೆ ಮಾತ್ರ ಕೊಬ್ಬರಿ ಬೆಲೆಯಲ್ಲಿ ಚೇತರಿಕೆ ಕಾಣಲಿದೆ ಎನ್ನುತ್ತಾರೆ ಕೊಬ್ಬರಿ ವರ್ತಕ ವೀರಭದ್ರಪ್ಪ. ಒಟ್ಟಾರೆ ಮುಂಬೈ ಮಹಾಮಳೆಯಿಂದ ಅಲ್ಲಿನ ಜನ ತತ್ತರಿಸಿಹೋಗಿದ್ದರೆ, ಇತ್ತ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಬಿಕೋ ಎನ್ನುತ್ತಿದೆ.

ABOUT THE AUTHOR

...view details