ತುಮಕೂರು :ಮಾಜಿ ಡಿಸಿಎಂಡಾ.ಜಿ ಪರಮೇಶ್ವರ್ ಅವರಿಗೆ ಶತ್ರುಗಳೇ ಇಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹಾಡಿ ಹೊಗಳಿದ್ದಾರೆ. ಜಿಲ್ಲೆಯ ಕೊರಟಗೆರೆಯಲ್ಲಿ ಕಂದಾಯ ಇಲಾಖೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಪರಮೇಶ್ವರ್ ನನಗೆ ಬಹಳ ಆತ್ಮೀಯ ಸ್ನೇಹಿತರು, ಒಂದು ರೀತಿ ಅಜಾತ ಶತ್ರು ಇದ್ದಂಗೆ ಎಂದಿದ್ದಾರೆ.
ರಸ್ತೆಯಲ್ಲಿದ್ರೂ, ಮನೆಯಲ್ಲಿದ್ರೂ ಚಿನ್ನ ಚಿನ್ನವೇ.. ಜಿ ಪರಮೇಶ್ವರ್ ಅಜಾತ ಶತ್ರು ಇದ್ದಂಗೆ.. ಸಚಿವ ಆರ್. ಅಶೋಕ್‌ರಿಂದ ಗುಣಗಾನ - ಆರ್ ಅಶೋಕ್ ಲೇಟೆಸ್ಟ್ ನ್ಯೂಸ್
ಚಿನ್ನ ರಸ್ತೆಯಲ್ಲಿದ್ರೂ ಚಿನ್ನ, ಮನೆಯಲ್ಲಿದ್ರೂ ಚಿನ್ನವೇ.. ಒಳ್ಳೆಯ ಮನುಷ್ಯರು ಎಲ್ಲಿಯೇ ಇದ್ರೂ ಒಳ್ಳೆಯ ಮನುಷ್ಯರಾಗಿರುತ್ತಾರೆ..
ಸಚಿವ ಆರ್. ಅಶೋಕ್
ಒಳ್ಳೆಯ ಮನುಷ್ಯರು ಎಲ್ಲಿಯೇ ಇದ್ರೂ ಒಳ್ಳೆಯ ಮನುಷ್ಯರಾಗಿರುತ್ತಾರೆ. ಇದಕ್ಕೆ ಪರಮೇಶ್ವರ್ ಉದಾಹಣೆಯಾಗಿದ್ದಾರೆ. ಚಿನ್ನ ರಸ್ತೆಯಲ್ಲಿದ್ರೂ ಚಿನ್ನ, ಮನೆಯಲ್ಲಿದ್ರೂ ಚಿನ್ನವೇ.. ಅದರ ಬೆಲೆ ಹಾಗೆಯೇ ಇರುತ್ತದೆ ಎಂದು ಪರಮೇಶ್ವರ್ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.
ಇದನ್ನೂ ಓದಿ:ಮಾತಾ ಅಮೃತಾನಂದಮಯಿ ಟ್ರಸ್ಟ್ಗೆ ಜಮೀನು ಹಂಚಿಕೆ ವಿವಾದ : ಕ್ರಮ ಜರುಗಿಸುವ ಬದಲು, ನಿಯಮವನ್ನೇ ಬದಲಿಸಿದ ಸರ್ಕಾರ