ತುಮಕೂರು:ಕೋವಿಡ್-19 ಸೋಂಕು ತಡೆಗಟ್ಟುವ ಹಿನ್ನೆಲೆ ನಗರದ 1,915 ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದ್ದು, 775 ಮಂದಿಯನ್ನ ಶಂಕಿತರೆಂದು ಗುರುತಿಸಿ ಜಿಲ್ಲಾಸ್ಪತ್ರೆಯ ಐಸೋಲೋಷನ್ನಲ್ಲಿ ಇರಿಸಲಾಗಿದೆ.
ತುಮಕೂರಲ್ಲಿ 1,915 ಜನ ಕ್ವಾರಂಟೈನ್: ಇಬ್ಬರು ಸೋಂಕಿತರು ಗುಣಮುಖ - Tumkur Corona News
ತುಮಕೂರು ಜಿಲ್ಲೆಯಲ್ಲಿ 11 ಮಂದಿಯಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು, ಇಬ್ಬರು ಮೃತಪಟ್ಟಿದ್ದಾರೆ. 13 ವರ್ಷದ ಬಾಲಕ ಸೇರಿ ಇಬ್ಬರು ಗುಣಮುಖರಾಗಿದ್ದು, 1,915 ಮಂದಿಯನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.
![ತುಮಕೂರಲ್ಲಿ 1,915 ಜನ ಕ್ವಾರಂಟೈನ್: ಇಬ್ಬರು ಸೋಂಕಿತರು ಗುಣಮುಖ Quarantine of 1,915 people in Tumkur.](https://etvbharatimages.akamaized.net/etvbharat/prod-images/768-512-7216868-19-7216868-1589606996493.jpg)
ಕಲ್ಪತರು ನಾಡಲ್ಲಿ 1,915 ಜನರ ಕ್ವಾರಂಟೈನ್..ಇಬ್ಬರು ಸೋಂಕಿತರು ಗುಣಮುಖ
ಇದುವರೆಗೂ ಜಿಲ್ಲೆಯಾದ್ಯಂತ 6,649 ಜನರ ಸ್ಯಾಂಪಲ್ಗಳನ್ನ ಪಡೆಯಲಾಗಿದ್ದು, ಅದರಲ್ಲಿ 6,274 ಮಂದಿಯ ವರದಿ ನೆಗೆಟಿವ್ ಬಂದಿದೆ. 375 ಮಂದಿಯ ಸ್ಯಾಂಪಲ್ಗಳ ವರದಿ ಬರಬೇಕಿದ್ದು, 38 ಜನರ ಸ್ಯಾಂಪಲ್ ತಿರಸ್ಕರಿಸಿ, ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ 11 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. 13 ವರ್ಷದ ಬಾಲಕ ಸೇರಿ ಇಬ್ಬರು ಗುಣಮುಖರಾಗಿದ್ದಾರೆ.
ಏಳು ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಮೂರು ಕಡೆ ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿದೆ.