ತುಮಕೂರು:ಹುಳಿಯಾರು ಕನಕವೃತ್ತ ವಿವಾದಕ್ಕೆ ಸಂಬಂಧಿಸಿದಂತೆ ಕುರುಬ ಸಮುದಾಯದ ಸಂಘಟನೆಯವರು ನಡೆಸುತ್ತಿರುವ ಪ್ರತಿಭಟನೆ ಪೂರ್ವಗ್ರಹಪೀಡಿತವಾಗಿದ್ದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಟೀಕಿಸಿದರು.
ಸಚಿವ ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಸರಿಯಲ್ಲ: ಸಾಗರನಹಳ್ಳಿ ನಟರಾಜು - ಲೆಟೆಸ್ಟ್ ತುಮಕೂರು ನ್ಯೂಸ್
ಸಚಿವ ಮಾಧುಸ್ವಾಮಿ ವಿರುದ್ಧ ಕುರುಬ ಸಮಾಜದ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಸರಿಯಲ್ಲವೆಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ಹೇಳಿದರು.
ಮಾಧುಸ್ವಾಮಿ ವಿರುದ್ಧದ ಪ್ರತಿಭಟನೆ ಸರಿಯಲ್ಲ : ಸಾಗರನಹಳ್ಳಿ ನಟರಾಜು
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಮಾಧುಸ್ವಾಮಿ ಯಾವುದೇ ಒಂದು ಸಮುದಾಯದ ಜಾತಿಗೆ ಸೀಮಿತವಾಗಿ ರಾಜಕಾರಣ ಮಾಡಿದವರಲ್ಲ, ಅವರು ಜಾತಿವಾದಿಯಲ್ಲ. ಯಾರದ್ದೋ ಪಿತೂರಿಯಿಂದ ಆದ ಘಟನೆಗೆ ಮಾಧುಸ್ವಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವುದು ಸರಿಯಲ್ಲ ಎಂದರು.
ಕನಕದಾಸರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದವರಲ್ಲ, ಅಂತಹವರ ಹೆಸರನ್ನಿಡುವುದಕ್ಕೆ ನಮ್ಮ ವಿರೋಧವಿಲ್ಲ. ಈಗ ನಾಮಕರಣಗೊಂಡಿರುವುದು ಕ್ರಮಬದ್ಧವಾಗಿಲ್ಲದೇ ಇರುವುದು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದೆ ಎಂದು ನಟರಾಜು ಹೇಳಿದ್ರು.