ಕರ್ನಾಟಕ

karnataka

ETV Bharat / state

ತುಮಕೂರಲ್ಲಿ ಸಿಎಎ ವಿರುದ್ಧ ಜನಜಾಗೃತಿ ಸಮಾವೇಶ - Protest against CAA In Thumkuru

ನಗರದ ಮರಳೂರು ದಿಣ್ಣೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಹಮ್ಮಿಕೊಂಡ ಬೃಹತ್ ಜನಜಾಗೃತಿ ಸಮಾವೇಶ ನಡೆಯಿತು.

Protest against CAA In Thumkuru
ಸಿಎಎ ವಿರುದ್ಧ ತುಮಕೂರಿನಲ್ಲಿ ಜನಜಾಗೃತಿ ಸಮಾವೇಶ

By

Published : Feb 9, 2020, 7:32 PM IST

Updated : Feb 9, 2020, 7:37 PM IST

ತುಮಕೂರು:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಬೃಹತ್ ಜನಜಾಗೃತಿ ಸಮಾವೇಶ ನಗರದ ಮರಳೂರು ದಿಣ್ಣೆಯಲ್ಲಿ ನಡೆಯಿತು.

ಸಿಎಎ ವಿರುದ್ಧ ತುಮಕೂರಿನಲ್ಲಿ ಜನಜಾಗೃತಿ ಸಮಾವೇಶ

ಕಾರ್ಯಕ್ರಮದಲ್ಲಿ ವಕೀಲ ಅಜಿಮ್ ಶರೀಫ್ ಮಾತನಾಡಿ, ನೈತಿಕವಾಗಿರುವ ಸಂವಿಧಾನದಲ್ಲಿ ಅನೈತಿಕ ಕಾನೂನುಗಳನ್ನು ಸೇರಿಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. ಆರ್​​ಎಸ್​ಎಸ್​ನವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಗುಂಡಿಟ್ಟು ಕೊಂದ ನಾಥೂರಾಮ್ ಗೋಡ್ಸೆಯ ಅನುಯಾಯಿಗಳು. ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತಹ ಮಹಾತ್ಮ ಗಾಂಧೀಜಿ ದೇಶಪ್ರೇಮಿಯಲ್ಲ, ನಾಥುರಾಮ್ ಗೋಡ್ಸೆ ನಮ್ಮ ದೇಶದ ಮಹಾತ್ಮ ಎಂದು ಸಂಸದ ಅನಂತ್​ ಕುಮಾರ್​ ಹೇಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು, ಮಹಾತ್ಮ ಗಾಂಧೀಜಿಯವರ ಬಗ್ಗೆ ಮಾತನಾಡಲು ಅವರಿಗೆ ಅರ್ಹತೆ ಇದೆಯೇ ಎಂದು ಪ್ರಶ್ನಿಸಿದರು.

ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿದೆ. ಇದರ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅನೇಕ ಸಲಹೆ ನೀಡಿದರೂ, ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Last Updated : Feb 9, 2020, 7:37 PM IST

For All Latest Updates

ABOUT THE AUTHOR

...view details