ಕರ್ನಾಟಕ

karnataka

ETV Bharat / state

ಮಗುವಿಗೆ ಹಾಲು ಕುಡಿಸುವ ನಿಪ್ಪಲ್ ನುಂಗಿ ಒದ್ದಾಡುತ್ತಿದ್ದ ಹಾವು ರಕ್ಷಣೆ - snake swallowed the nipple

ಆಹಾರವೆಂದು ನಿಪ್ಪಲ್ ನುಂಗಿ ಒದ್ದಾಡುತ್ತಿದ್ದ ಹಾವನ್ನು ಉರಗ ತಜ್ಞ ಮನು ಅಗ್ನಿ ವಂಶಿ ರಕ್ಷಿಸಿ, ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

snake
ನಿಪ್ಪಲ್ ನುಂಗಿ ಒದ್ದಾಡುತ್ತಿದ್ದ ಹಾವು ರಕ್ಷಣೆ

By

Published : Dec 4, 2022, 2:13 PM IST

ತುಮಕೂರು: ಮಗುವಿಗೆ ಹಾಲು ಕುಡಿಸುವ ನಿಪ್ಪಲ್ ನುಂಗಿ ಒದ್ದಾಡುತ್ತಿದ್ದ ಹಾವನ್ನು ಉರಗ ತಜ್ಞ ಮನು ಅಗ್ನಿವಂಶಿ ರಕ್ಷಿಸಿದ್ದಾರೆ. ತುಮಕೂರು ನಗರದ ಸಿದ್ದರಾಮೇಶ್ವರ ಬಡಾವಣೆಯ ಕಿರಣ್ ಕುಮಾರ್ ಎಂಬುವರ ಮನೆಯಲ್ಲಿ ಹಾವು ಕಂಡು ಬಂದಿದೆ.

ನಿಪ್ಪಲ್ ನುಂಗಿ ಒದ್ದಾಡುತ್ತಿದ್ದ ಹಾವು ರಕ್ಷಣೆ

ಸುಮಾರು 2.5 ಅಡಿ ಉದ್ದದ ಹಾವೊಂದು ಮೆಟ್ಟಿಲ ಕೆಳಗೆ ಇರುವುದನ್ನು ನೋಡಿದ ಮನೆಯವರು ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ ಮತ್ತು ರುದ್ರೇಶ್ ಚಿಕ್ಕತೊಟ್ಲುಕೆರೆ ಹಾವನ್ನು ರಕ್ಷಣೆ ಮಾಡಿ, ಸಮೀಪದ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ:ತುಮಕೂರಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ.. ಏನಿದರ ವಿಶೇಷತೆ?

ABOUT THE AUTHOR

...view details