ಕರ್ನಾಟಕ

karnataka

ETV Bharat / state

ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿ : ಬಸ್​ಗಳು​ ಮಾರಾಟಕ್ಕಿವೆ ಎಂದು ಖಾಸಗಿ ಬಸ್ ಮಾಲೀಕರ ಪ್ರತಿಭಟನೆ! - ಮಹಿಳೆಯರಿಗೆ ಉಚಿತ ಪ್ರಯಾಣ

ಖಾಸಗಿ ಬಸ್​ ಚಾಲಕರು ನಮ್ಮ‌ ಬಸ್ ಗಳು ಮಾರಾಟಕ್ಕಿಟ್ಟಿದ್ದೇವೆ‌.. ಖರೀದಿಸಿ ಎಂದು ಪೋಸ್ಟರ್​ಗಳನ್ನು ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಂಗಾಲಾದ ಖಾಸಗಿ ಬಸ್ ಮಾಲೀಕರು
ಕಂಗಾಲಾದ ಖಾಸಗಿ ಬಸ್ ಮಾಲೀಕರು

By

Published : Jun 7, 2023, 3:50 PM IST

Updated : Jun 7, 2023, 4:18 PM IST

ಸರ್ಕಾರದ ಉಚಿತ ಬಸ್​ ಪ್ರಯಾಣ ಯೋಜನೆ.. ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟ

ತುಮಕೂರು :ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂಬ ವಿಶ್ವಾಸದಲ್ಲಿ ಇದ್ದಾರೆ. ಇನ್ನೊಂದೆಡೆ ಸರ್ಕಾರಿ ಬಸ್​ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿ ಜೂನ್​ 11 ರಿಂದ ಜಾರಿಗೆ ಬರುತ್ತಿದೆ. ಇದರಿಂದ ನಮಗೆ ವ್ಯತಿರಿಕ್ತವಾಗಿ ಪರಿಣಾಮ ಬೀರಲಿದೆ ಎಂದು ತುಮಕೂರು ಜಿಲ್ಲೆಯ ಖಾಸಗಿ ಬಸ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಖಾಸಗಿ ಬಸ್ ಮಾಲೀಕರಾದ ಬಸವರಾಜ್ ಮಾತನಾಡಿ, ಉಚಿತ ಬಸ್ ಪ್ರಯಾಣ ಯೋಜನೆಯಿಂದ ತುಮಕೂರು ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಸರ್ಕಾರಿ ಬಸ್ ಗಳಿಗೆ ಕೊಡುವ ಸಹಾಯವನ್ನು ಖಾಸಗಿ ಬಸ್ ಮಾಲೀಕರಿಗೂ ಕೊಡಿ. ನಾವು ಸಹ ಮಹಿಳೆಯರನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ ಎಂದರು.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವುದರಿಂದ ನಮ್ಮ‌ ಹೊಟ್ಟೆ ಮೇಲೆ‌ ಹೊಡೆದಂತಾಗಿದೆ. ಖಾಸಗಿ ಬಸ್ ನಂಬಿಕೊಂಡು 20ಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿವೆ. ಈ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಜಾರಿ ಮಾಡಿದ್ದು, ಮಹಿಳೆಯರು ಖಾಸಗಿ ಬಸ್​ ಕಡೆ ಮುಖ ಮಾಡದೆ ಇರುವುದರಿಂದ ನಾವು ಬಸ್ ಮಾರಿಕೊಳ್ಳಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕೋ ಗೊತ್ತಿಲ್ಲ..? ಡೀಸೆಲ್​ ಬೆಲೆ ಹೆಚ್ಚಿರುವ ಕಾರಣ ಡೀಸೆಲ್​ಗೆ ಸಬ್ಸಿಡಿ ಕೊಡಿ, ಇಲ್ಲ.. ನಮ್ಮ ಮೇಲೆ ವಿಧಿಸಿರುವ ಟ್ಯಾಕ್ಸ್​ಗಳನ್ನು ಮನ್ನಾ ಮಾಡಿ ಎಂದು ಸರ್ಕಾರಕ್ಕೆ ಬಸವರಾಜ್ ಮನವಿ ಮಾಡಿದರು.

ತುಮಕೂರು ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಬಸ್ ಓಡಾಟ ನಡೆಸುತ್ತಿವೆ. ಖಾಸಗಿ ಬಸ್ ಗಳನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಲಿ. ಜಿಲ್ಲೆಯಲ್ಲಿರುವ ಖಾಸಗಿ ಬಸ್ ಸಂಚಾರ ವ್ಯವಸ್ಥೆಗೆ ಪರ್ಯಾಯವಾಗಿ ಬಸ್ ಮಾಲೀಕರು ಹಾಗೂ ಚಾಲಕರಿಗೆ ಆರ್ಥಿಕವಾಗಿ ಸಬಲರಾಗಲು ಸರ್ಕಾರವೇ ದಾರಿ ತೋರಿಸಬೇಕಿದೆ ಎಂದು ಖಾಸಗಿ ಬಸ್​ ಚಾಲಕರು ನಮ್ಮ‌ ಬಸ್​ಗಳು ಮಾರಾಟಕ್ಕಿಟ್ಟಿದ್ದೇವೆ‌ ಖರೀದಿಸಿ ಎಂದು ಪೋಸ್ಟರ್​ಗಳನ್ನು ಬಸ್​ ಮುಂಬಾಗ ಅಂಟಿಸಿಕೊಂಡಿದ್ದಾರೆ.

ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ 40 ರಿಂದ 50 ಸಾವಿರ ಟ್ಯಾಕ್ಸ್ ಕಟ್ಟುತ್ತೇವೆ. ಹಾಗು ಪ್ರತಿ ವರ್ಷಕ್ಕೊಮ್ಮೆ 70 ರಿಂದ 80 ಸಾವಿರ ಇನ್​ಶ್ಯೂರೆನ್ಸ್ ಕಟ್ಟುತ್ತೇವೆ. ಮುಂದಿನ ದಿನಗಳಲ್ಲಿ ಉಚಿತ ಬಸ್ ಯೋಜನೆ‌ ಜಾರಿಯಿಂದ‌ ಹೇಗೆ ಟ್ಯಾಕ್ಸ್ ಕಟ್ಟೋದು? ಎಂದು ಪ್ರಶ್ನೆ ಮಾಡಿದ ಬಸವರಾಜ್, ನಮಗೂ ಇನ್ ಶ್ಯೂರೆನ್ಸ್ ಅಥವಾ ಟ್ಯಾಕ್ಸ್ ಫ್ರೀ ಮಾಡಿ. ಈಗಾಗಲೇ ಖಾಸಗಿ ಬಸ್ ಗಳಿಗೆ ಮಹಿಳೆಯರು ಬರುವವರ ಸಂಖ್ಯೆ ಕಡಿಮೆಯಾಗಿದೆ.

ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಿಗೆ ಜಿಲ್ಲೆಯಲ್ಲಿ ಖಾಸಗಿ ಬಸ್​ಗಳಿಗೆ ಸಂಚಾರವಿದ್ದು, ಅಲ್ಲಿಗೂ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಬಹುದು ಎಂದು ಹೋಗುತ್ತಾರೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಖಾಸಗಿ ಬಸ್​ಗಳಿಗೆ ಮಹಿಳೆಯರು ಬರುವುದು ಕಡಿಮೆಯಾಗಲಿದೆ. ಹೀಗಾಗಿ ಖಾಸಗಿ ಬಸ್ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ :ಆಗಸ್ಟ್​ನಿಂದ ಮನೆ ಬೆಳಗಲಿದೆ ಗೃಹಜ್ಯೋತಿ.. 200 ಯೂನಿಟ್​ ಮೀರಿದ್ರೆ ಸಂಪೂರ್ಣ ಬಿಲ್ ಕಟ್ಟಿ​ - ಸಚಿವ ಜಾರ್ಜ್​

Last Updated : Jun 7, 2023, 4:18 PM IST

ABOUT THE AUTHOR

...view details