ಕರ್ನಾಟಕ

karnataka

ETV Bharat / state

ಕೆಲಸದ ಸ್ಥಳದಿಂದ ಫೋಟೋ ತೆಗೆದು ವಾಟ್ಸಪ್ ಮಾಡಿ: ಪಶುವೈದ್ಯರಿಗೆ ಸಚಿವ ಚೌವ್ಹಾಣ್​ ಸೂಚನೆ

ಸಭೆಯಲ್ಲಿ ಮಾತನಾಡಿದ ಸಚಿವರು, ವೈದ್ಯರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುತ್ತಿಲ್ಲ. ಹೀಗಾದರೆ ನಮ್ಮ ಪಶುಗಳ ಗತಿಯೇನು ಎಂದು ರೈತರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ನಾಳೆಯಿಂದಲೇ ಪ್ರತಿಯೊಬ್ಬರೂ ಸಹ ತಾವು ಕರ್ತವ್ಯ ನಿರ್ವಹಿಸುವ ಸ್ಥಳದಿಂದ ವಾಟ್ಸಪ್ ಮೂಲಕ ಒಂದು ಫೋಟೋ ಕಳುಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Prabhu chauhan
ಪಶು ವೈದ್ಯರಿಗೆ ಖಡಖ್​ ವಾರ್ನಿಂಗ್​ ಕೊಟ್ಟ ಚವ್ಹಾಣ್​

By

Published : Jul 6, 2020, 7:50 PM IST

ತುಮಕೂರು: ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಧ್ಯಕ್ಷತೆಯಲ್ಲಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಸಚಿವರು, ವೈದ್ಯರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುತ್ತಿಲ್ಲ. ಹೀಗಾದರೆ ನಮ್ಮ ಪಶುಗಳ ಗತಿಯೇನು ಎಂದು ರೈತರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ನಾಳೆಯಿಂದಲೇ ಪ್ರತಿಯೊಬ್ಬರೂ ಸಹ ತಾವು ಕರ್ತವ್ಯ ನಿರ್ವಹಿಸುವ ಸ್ಥಳದಿಂದ ವಾಟ್ಸಪ್ ಮೂಲಕ ಒಂದು ಫೋಟೋ ಕಳುಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪಶುವೈದ್ಯರಿಗೆ ಸಚಿವ ಪ್ರಭು ಚವ್ಹಾಣ್​ ಸೂಚನೆ

ಜಿಲ್ಲೆಯಲ್ಲಿ ಪಶುಗಳ ಅಗತ್ಯಕ್ಕೆ ಬೇಕಿರುವ ಮೇವು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಔಷಧಿಗಳ ಬಗ್ಗೆ ಚರ್ಚೆ ನಡೆಸಿದ ಸಚಿವರು, ಪ್ರತಿಯೊಬ್ಬ ಅಧಿಕಾರಿಯೂ ಸಹ ತಳಮಟ್ಟದಿಂದ ಕೆಲಸ ನಿರ್ವಹಿಸುವ ಜೊತೆಗೆ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಪ್ರತಿ ಮನೆಗೂ ಹೋಗುವ ಮೂಲಕ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಹಿಂದೆ ಏನಾಗಿದೆ ಎಂದು ನಾನು ಪ್ರಶ್ನಿಸುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ ವೈದ್ಯಾಧಿಕಾರಿಗಳು ಕರ್ತವ್ಯ ನಿರ್ವಹಿಸುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರದಿಂದ ಇಲಾಖೆಗೆ ಮಂಜೂರಾದ ಹಣವನ್ನು ಪೂರ್ಣವಾಗಿ ಬಳಸಿಕೊಂಡು ಉತ್ತಮ ಸೇವೆ ಸಲ್ಲಿಸಿ, ಆ ಮೂಲಕ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತನ್ನಿ ಎಂದರು.

ABOUT THE AUTHOR

...view details