ಕರ್ನಾಟಕ

karnataka

ETV Bharat / state

ಸಾವರ್ಕರ್ ಇರುವ ಗಣೇಶೋತ್ಸವ ಫ್ಲೆಕ್ಸ್​ ತೆರವುಗೊಳಿಸಿದ ಪೊಲೀಸರು, ಪಾಲಿಕೆ ಅಧಿಕಾರಿಗಳು - ಸಾವರ್ಕರ್ ಫೋಟೋ

ನಿನ್ನೆ ಸಂಜೆ ಫ್ಲೆಕ್ಸ್ ತೆರವುಗೊಳಿಸಲು ಮುಂದಾಗಿದ್ದ ಪಾಲಿಕೆ ಅಧಿಕಾರಿಗಳು, ಪೊಲೀಸರ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ.

Clash between police and Bajrang Dal workers
ಪೊಲೀಸರ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದ

By

Published : Aug 26, 2022, 1:29 PM IST

Updated : Aug 26, 2022, 2:21 PM IST

ತುಮಕೂರು:ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್​​ನಿಂದ ತುಮಕೂರು ನಗರದ ಐದು ಕಡೆ ಫ್ಲೆಕ್ಸ್ ಅಳವಡಿಸಲು ಅನುಮತಿ ಪಡೆಯಲಾಗಿದ್ದರು ಸಹ ಅದರಲ್ಲಿ ಸಾವರ್ಕರ್ ಫೋಟೋ ಇದೆ ಎಂಬ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ತೆರವು ಗೊಳಿಸಿರುವ ಘಟನೆ ನಡೆದಿದೆ.

ಇನ್ನು ಪಾಲಿಕೆಯ ಅಧಿಕಾರಿಗಳ ಪ್ರಕಾರ ಜಯನಗರದಲ್ಲಿರುವ ಪ್ರದೇಶದಲ್ಲಿ ಫ್ಲೆಕ್ಸ್ ಅಳವಡಿಸಲು ಅನುಮತಿ ಪಡೆದಿಲ್ಲ. ಆದರೂ ಟ್ರಾನ್ಸ್ ಫಾರ್ಮರ್ ಬಳಿ ಫ್ಲೆಕ್ಸನ್ನು ಅಳವಡಿಸಲಾಗಿದೆ ಎಂಬ ಕಾರಣವನ್ನು ನೀಡಿದ್ದಾರೆ. ನಿನ್ನೆ ಸಂಜೆ ಫ್ಲೆಕ್ಸ್ ತೆರವುಗೊಳಿಸಲು ಮುಂದಾಗಿದ್ದ ಪಾಲಿಕೆ ಅಧಿಕಾರಿಗಳು, ಪೊಲೀಸರ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ.

ಪೊಲೀಸರ ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ವಾಗ್ವಾದ

ನಂತರ ಫ್ಲೆಕ್ಸ್ ತೆರವುಗೊಳಿಸುವುದಿಲ್ಲ ಎಂದು ಹೊರಟು ಹೋಗಿದ್ದರು. ಆದರೆ ರಾತ್ರೋರಾತ್ರಿ ಬಂದು ಫ್ಲೆಕ್ಸ್ ತೆರವುಗೊಳಿಸಲಾಗಿದೆ ಎಂದು ಬಜರಂಗದಳ ಕಾರ್ಯಕರ್ತ ಮಂಜು ಭಾರ್ಗವ ಆರೋಪಿಸಿದ್ದಾರೆ.

ಇದನ್ನೂ ಓದಿ :ಸಾವರ್ಕರ್ ಫ್ಲೆಕ್ಸ್​ ವಿವಾದ: ಅನಧಿಕೃತ ಜಾಹೀರಾತು ನಿಯಂತ್ರಣಕ್ಕೆ ಶಿವಮೊಗ್ಗ ಪಾಲಿಕೆ ಕ್ರಮ

Last Updated : Aug 26, 2022, 2:21 PM IST

ABOUT THE AUTHOR

...view details