ಕರ್ನಾಟಕ

karnataka

ETV Bharat / state

ಸೈಬರ್ ಕ್ರೈಂ ತಡೆಗೆ ಪೊಲೀಸರ ಹೊಸ ಹೆಜ್ಜೆ.. ಜನರ ಬಳಿ ತಲುಪಿ ಜಾಗೃತಿಗೆ ಮುಂದಾದ ಖಾಕಿ..

ಮೊಬೈಲ್​​ಗೆ ಬರುವ ಕರೆಗಳು ಮೆಸೇಜ್​ಗಳಿಗೆ ಅಥವಾ ಅಪರಿಚಿತರೊಂದಿಗೆ ಬ್ಯಾಂಕ್ ಸಂಬಂಧ ಪಟ್ಟ ದಾಖಲೆಗಳ ನೀಡುವುದನ್ನು ತಡೆಯಬೇಕು. ಜೊತೆಗೆ ಖಾಸಗಿ ಸೈಟ್​​ಗಳಲ್ಲಿ ತಮ್ಮ ಬ್ಯಾಂಕಿಂಗ್ ವ್ಯವಹಾರ ಸಂಬಂಧ ಪಟ್ಟ ಮಾಹಿತಿಗಳನ್ನ ಹಂಚಿಕೊಳ್ಳದಂತೆ ಜನರಲ್ಲಿ ತಿಳಿಹೇಳುವ ಕಾರ್ಯ ಮಾಡುತ್ತಿದ್ದಾರೆ..

ಸೈಬರ್ ಕ್ರೈಂ ತಡೆಗೆ ಪೊಲೀಸರ ಹೊಸ ಹೆಜ್ಜೆ
ಸೈಬರ್ ಕ್ರೈಂ ತಡೆಗೆ ಪೊಲೀಸರ ಹೊಸ ಹೆಜ್ಜೆ

By

Published : Aug 7, 2021, 3:36 PM IST

ತುಮಕೂರು :ಜಿಲ್ಲೆಯಲ್ಲಿ ಸೈಬರ್ ಕ್ರೈಂ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಉದಾಹರಣೆ ಎಂಬಂತೆ ಲಾಕ್​​​ಡೌನ್​ ಆರಂಭವಾದಾಗಿನಿಂದ ನಿತ್ಯ ಒಂದಿಲ್ಲೊಂದು ಸೈಬರ್ ಕ್ರೈಂ ದಾಖಲಾಗುತ್ತಲೇ ಇವೆ.

ಇನ್ನು, ಇಂತಹ ಸೈಬರ್ ಕ್ರೈಂ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸಲು ಬೀದಿಗಿಳಿದಿರುವ ಪೊಲೀಸರು ನಿತ್ಯ ಒಂದಿಲ್ಲೊಂದು ಕಡೆ ಇಂತಹ ಸೈಬರ್ ವಂಚನೆಯಿಂದ ಜಾಗೃತರಾಗಿರುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಸೈಬರ್ ಕ್ರೈಂ ತಡೆಗೆ ಪೊಲೀಸರ ಹೊಸ ಹೆಜ್ಜೆ

ಸುಲಭವಾಗಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿ ಬೇರೆಲ್ಲೋ ಕುಳಿತ ಸೈಬರ್ ಕಳ್ಳರು ವಂಚನೆ ಎಸಗುತ್ತಿದ್ದಾರೆ. ಅಮಾಯಕರು ಇಂತಹ ಸೈಬರ್ ಕಳ್ಳರಿಂದ ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಿದ್ದಾರೆ. ದೂರು ನೀಡಿದ ನಂತರ ಪೊಲೀಸರು ಅವರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.

ಮೊಬೈಲ್​​ಗೆ ಬರುವ ಕರೆಗಳು ಮೆಸೇಜ್​ಗಳಿಗೆ ಅಥವಾ ಅಪರಿಚಿತರೊಂದಿಗೆ ಬ್ಯಾಂಕ್ ಸಂಬಂಧ ಪಟ್ಟ ದಾಖಲೆಗಳ ನೀಡುವುದನ್ನು ತಡೆಯಬೇಕು. ಜೊತೆಗೆ ಖಾಸಗಿ ಸೈಟ್​​ಗಳಲ್ಲಿ ತಮ್ಮ ಬ್ಯಾಂಕಿಂಗ್ ವ್ಯವಹಾರ ಸಂಬಂಧ ಪಟ್ಟ ಮಾಹಿತಿಗಳನ್ನ ಹಂಚಿಕೊಳ್ಳದಂತೆ ಜನರಲ್ಲಿ ತಿಳಿಹೇಳುವ ಕಾರ್ಯ ಮಾಡುತ್ತಿದ್ದಾರೆ.

ABOUT THE AUTHOR

...view details