ತುಮಕೂರು:ಕೊರೊನಾ ವೈರಸ್ ಭೀತಿ ಹಿನ್ನೆಲೆ ಈಗಾಗಲೇ ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಆಗಮಿಸುವ ಸಾರ್ವಜನಿಕರು ನಿಯಮ ಪಾಲಿಸುವಂತೆ ತುಮಕೂರು ಜಿಲ್ಲೆಯ ಪೊಲೀಸರು ವಿಭಿನ್ನ ರೀತಿಯಲ್ಲಿ ಮನವಿ ಮಾಡುತ್ತಿದ್ದಾರೆ.
ದಿನಸಿ ಅಂಗಡಿ ಬಳಿ ಪೊಲೀಸರ ಮುಂಜಾಗ್ರತಾ ಕ್ರಮವಿದು.. - ತುಮಕೂರು
ಅಗತ್ಯ ವಸ್ತುಗಳ ಖರೀದಿಗೆ ಅಂಗಡಿಗಳಿಗೆ ಅಗಮಿಸುವ ಸಾರ್ವಜನಿಕರಿಗೆ ತುಮಕೂರು ಜಿಲ್ಲೆಯ ಪೊಲೀಸರು ವಿಭಿನ್ನ ರೀತಿಯಲ್ಲಿ ಸಲಹೆ ನೀಡುತ್ತಿದ್ದಾರೆ.
tmk
ದಿನಸಿ ಅಂಗಡಿ ಮುಂದೆ ವೃತ್ತ ರಚಿಸಿ ಅದರಲ್ಲೇ ನಿಂತು ಸಾಮಾನು ಖರೀದಿ ಮಾಡುವಂತೆ ಸಲಹೆ ಕೊಡುತ್ತಿದ್ದಾರೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸುತ್ತಿದ್ದಾರೆ.
ಚೇಳೂರಿನಲ್ಲಿ ಪೊಲೀಸ್ ಠಾಣೆ ಪಿಎಸ್ಐ ವಿಜಯಕುಮಾರ್ ಕೊವಿಡ್-19 ಹರಡದಂತೆ ದಿನಸಿ ಅಂಗಡಿಗಳ ಬಳಿ ಈ ರೀತಿಯ ವ್ಯವಸ್ಥೆ ಕಲ್ಪಿಸಿದ್ದಾರೆ.