ತುಮಕೂರು:ನಕಲಿ ಎಟಿಎಂ ಕಾರ್ಡ್ ಬಳಸಿ ಎಟಿಎಂ ಮಿಷನ್ಗಳಿಂದ ಹಣ ಲಪಟಾಯಿಸಲು ವಿದೇಶಿ ವಿದ್ಯಾರ್ಥಿಗಳು ಗೂಗಲ್ ಮೊರೆ ಹೋಗಿದ್ದರು ಎಂಬುದನ್ನು ನಂಬಲು ಅಸಾಧ್ಯವಾದ್ದರೂ ಸತ್ಯವಾಗಿದ್ದು, ಇಂತಹದ್ದೊಂದು ವಿದೇಶಿ ವಿದ್ಯಾರ್ಥಿಗಳ ವ್ಯವಸ್ಥಿತ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಫಿಸಿಯೋ ಥೆರಪಿಸ್ಟ್ ವಿದ್ಯಾಭ್ಯಾಸ ಮಾಡಲು ಸ್ಟೂಡೆಂಟ್ ವಿಸಾ ಪಡೆದು ದೆಹಲಿಯಲ್ಲಿ ವಾಸವಾಗಿದ್ದ ಉಗಾಂಡಾದ ಐವಾನ್ ಕಾಂಬೋಗೆ ಮತ್ತು ಕಾಮರ್ಸ್ ವ್ಯಾಸಂಗ ಮಾಡುತ್ತಿದ್ದ ಕೀನ್ಯಾದ ನೈರೋಬಿಯ ಲಾರೆನ್ಸ್ ಮುಕಾಮು ಎಂಬ ಆರೋಪಿಗಳು ನಕಲಿ ಎಟಿಎಂ ಕಾರ್ಡ್ ಬಳಸಿ ಹಣ ಕಳ್ಳತನ ಮಾಡುತ್ತಿದ್ದರು. ಇವರ ಜೊತೆಗೆ ಇನ್ನಿಬ್ಬರು ಆರೊಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಈ ವಂಚಕರು ಎಟಿಎಂ ಸ್ಕಿಮ್ಮಿಂಗ್ ಮಷಿನ್ ಬಳಸಿ ನಕಲಿ ಎಟಿಎಂ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡುತ್ತಿದ್ದರು. ನೂತನ ತಂತ್ರಜ್ಞಾನ ಹೊಂದಿರುವ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಷಿನ್ ಅಳವಡಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ವಂಚಕರು ಸ್ಕಿಮ್ಮಿಂಗ್ ಮಷಿನ್ ಅಳವಡಿಸುವಂತಹ ಹಳೆ ತಂತ್ರಜ್ಞಾನವನ್ನು ಹೊಂದಿರುವ ಎಟಿಎಂ ಮಷಿನ್ಗಳನ್ನು ಜಿಲ್ಲೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಓದಿ: ತುಮಕೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರ ಮೇಲೆ ಕರಡಿ ದಾಳಿ
ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, ನಕಲಿ ಎಟಿಎಂ ಕಾರ್ಡ್ ಬಳಸಿ ಮತ್ತು ಜನರಿಗೆ ಮೋಸ ಮಾಡಿ ಬೇರೆ ಬೇರೆ ಕಡೆಯಿಂದ ಖದೀಮರು ಕಳ್ಳತನ ಮಾಡಿದ್ದಾರೆ. ಈ ಕುರಿತು ನವೆಂಬರ್ನಿಂದ ಡಿಸೆಂಬರ್ವರೆಗೆ ಸುಮಾರು 60 ಪ್ರಕರಣಗಳು ದಾಖಲಾಗಿದೆ.