ತುಮಕೂರು:ತೆಲುಗು ಸಾಹಿತಿ ವರವರರಾವ್ ಅವರನ್ನು ಪಾವಗಡದಲ್ಲಿ ನಡೆದಿದ್ದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ವಶಕ್ಕೆ ಪಡೆದು ಇಂದು ಪಾವಗಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪಾವಗಡದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಕವಿ ವರವರರಾವ್ ಹಾಜರು
ತೆಲುಗು ಸಾಹಿತಿ ವರವರರಾವ್ ಅವರನ್ನು ಪಾವಗಡದಲ್ಲಿ ನಡೆದಿದ್ದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ವಶಕ್ಕೆ ಪಡೆದು ಇಂದು ಪಾವಗಡ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ತೆಲುಗು ಕವಿ ವರವರರಾವ್ ಅವರನ್ನು ಪಾವಗಡದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಜರುಪಡಿಸಲಾಯಿತು.
2005 ರ ಫೆ. 5 ರಂದು ಪಾವಗಡದ ವೆಂಕಟ್ಮನಹಳ್ಳಿಯಲ್ಲಿ ಕೆ.ಎಸ್.ಆರ್.ಪಿ ಕ್ಯಾಂಪ್ ಮೇಲೆ ನಕ್ಸಲ್ ದಾಳಿ ನಡೆದಿತ್ತು. ಅಂದಿನ ನಕ್ಸಲ್ ದಾಳಿಯಲ್ಲಿ ಕೆ.ಎಸ್. ಆರ್. ಪಿ ಪೊಲೀಸರು ಸೇರಿ ಏಳು ಜನ ಮೃತಪಟ್ಟಿದ್ದರು.
ಪ್ರಕರಣದಲ್ಲಿ ತೆಲುಗು ಕವಿ ವರವರ ರಾವ್ ಹೆಸರು ಕೇಳಿ ಬಂದಿತ್ತು. ಇಲ್ಲಿವರೆಗೂ ಈ ಪ್ರಕರಣಕ್ಕೆ ಸಂಧಿಸಿದಂತೆ ವರವರ ರಾವ್ ಅವರನ್ನು ಬಂಧಿಸಿರಲಿಲ್ಲ. ಆದರೆ ಕರ್ನಾಟಕ ಪೊಲೀಸರು ಪುಣೆಯಿಂದ ಕರೆತಂದು ಇಂದು ಪಾವಗಡ ಜೆಎಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.