ತುಮಕೂರು: ನಗರದ ಮಾರುತಿ ವಿದ್ಯಾಕೇಂದ್ರ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಪ್ಲಾಸ್ಟಿಕ್ ನಿಷೇಧ ಕುರಿತು ನೃತ್ಯದ ಮೂಲಕ ಜಾಗೃತಿ ಮೂಡಿಸಿದರು.
ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ - ತುಮಕೂರು ಮಾರುತಿ ವಿದ್ಯಾ ಕೇಂದ್ರ ಶಾಲೆ
ನಗರದ ಎಸ್ಎಸ್ ಪುರಂನಲ್ಲಿರುವ ಮಾರುತಿ ವಿದ್ಯಾಕೇಂದ್ರದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳು ಪ್ಲಾಸ್ಟಿಕ್ ನಿಷೇಧ ಜಾಗೃತಿ ಕುರಿತು ನೃತ್ಯ ಮಾಡಿದ್ದಾರೆ.

ನೃತ್ಯ
ನೃತ್ಯ ಮಾಡುತ್ತಿರುವ ಶಾಲಾ ಮಕ್ಕಳು
ನಗರದ ಎಸ್ಎಸ್ ಪುರಂನಲ್ಲಿರುವ ಮಾರುತಿ ವಿದ್ಯಾಕೇಂದ್ರದ ಒಂದನೇ ತರಗತಿ ವಿದ್ಯಾರ್ಥಿಗಳು ನೃತ್ಯದ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ಹಾನಿ ಕುರಿತು ನೃತ್ಯದ ಮೂಲಕ ಮನೋಜ್ಞವಾಗಿ ಪ್ರದರ್ಶಿಸಿದರು.
ವೇದಿಕೆ ಮೇಲೆ ವಿದ್ಯಾರ್ಥಿಗಳು ಹೆಜ್ಜೆ ಹಾಕುತ್ತಿದ್ದರೆ, ಹಿಂಭಾಗದ ಪರದೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ದುಷ್ಪರಿಣಾಮದ ದೃಶ್ಯಾವಳಿಗಳು ಬಿತ್ತರಗೊಳ್ಳುತ್ತಿದ್ದವು.