ತುಮಕೂರು:ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿಹೊಲಗದ್ದೆಗಳು ಸೇರಿದಂತೆ ಎಲ್ಲೆಂದರಲ್ಲಿ ಓಡಾಡುತ್ತಿದ್ದ ಹಂದಿಗಳನ್ನು ಹಿಡಿಯುವ ಕಾರ್ಯಾಚರಣೆಗೆ ಹಂದಿ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಹಂದಿ ಹಿಡಿಯುವ ಕಾರ್ಯಾಚರಣೆಗೆ ಮಾಲೀಕರಿಂದ ವಿರೋಧ - ಇತ್ತೀಚಿನ ತುಮಕೂರು ಸುದ್ದಿ
ಹಂದಿ ಹಿಡಿಯುವ ಕಾರ್ಯಾಚರಣೆಗೆ ಹಂದಿ ಮಾಲೀಕರಿಂದ ವಿರೋಧ. ಹಂದಿಗಳ ಕಾಟದಿಂದ ಬೇಸತ್ತಿದ್ದ ರೈತರು ಹಾಗೂ ಸಾರ್ವಜನಿಕರು. ಹುಳಿಯಾರು ಪಟ್ಟಣ ಪಂಚಾಯಿತಿಯಿಂದ ಕಾರ್ಯಾಚರಣೆ.
ಹಂದಿ ಸೆರೆ ಹಿಡಿಯುವುದಕ್ಕೆ ಹಂದಿ ಮಾಲೀಕರ ಆಕ್ರೋಶ : ತುಮಕೂರು
ನಮಗೆ ಪ್ರತ್ಯೇಕ ಸ್ಥಳ ನೀಡುವಂತೆ ಹಂದಿ ಮಾಲೀಕರು ಒತ್ತಾಯಿಸಿದ್ರೆ, ಇನ್ನೊಂದೆಡೆ ಹಂದಿಗಳ ಕಾಟದಿಂದ ಬೆಳೆಗಳು ನಷ್ಟವಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ದಿನಗಳಿಂದ ಎಲ್ಲೆಂದರಲ್ಲಿ ಓಡಾಡುತ್ತಿದ್ದ ನೂರಕ್ಕೂ ಹೆಚ್ಚು ಹಂದಿಗಳನ್ನು ಹುಳಿಯಾರು ಪಟ್ಟಣ ಪಂಚಾಯಿತಿ ವತಿಯಿಂದ ಸೆರೆಹಿಡಿಯಲಾಗಿದೆ. ಪಟ್ಟಣದಲ್ಲಿ ಓಡಾಡುತ್ತಿರುವುದರಿಂದ ಅನೈರ್ಮಲ್ಯತೆ ಸೃಷ್ಟಿಯಾಗಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಹಂದಿಗಳನ್ನು ಸೆರೆ ಹಿಡಿದು ಪಟ್ಟಣದಿಂದ ದೂರ ಸಾಗಿಸಲಾಗುತ್ತಿದೆ.