ಕರ್ನಾಟಕ

karnataka

ETV Bharat / state

ತುಮಕೂರು ನಗರದ 21 ಹಾಟ್​​ಸ್ಪಾಟ್​ ಪ್ರದೇಶಗಳಲ್ಲಿ ನಿರಂತರ ಸ್ಯಾನಿಟೈಸ್ - ತುಮಕೂರು ನಗರದ 21 ಹಾಟ್​​ಸ್ಪಾಟ್​ ಪ್ರದೇಶಗಳಲ್ಲಿ ನಿರಂತರ ಸ್ಯಾನಿಟೈಸ್

ತುಮಕೂರು ಮಹಾನಗರ ಪಾಲಿಕೆಯಿಂದ ಪ್ರತ್ಯೇಕವಾಗಿ ವಾಹನವೊಂದನ್ನು ಸಿದ್ಧಪಡಿಸಲಾಗಿದ್ದು, ನೀರಿಗೆ ಸೋಡಿಯಂ ಹೈಪೋಕ್ಲೋರೈಡ್ ಬೆರೆಸಿ ಸಿಂಪಡಣೆ ಮಾಡಲಾಗುತ್ತಿದೆ. ಇದಕ್ಕಾಗಿ ನಿಯೋಜನೆ ಮಾಡಲಾಗಿರೋ ಪಾಲಿಕೆ ಸಿಬ್ಬಂದಿ ಹಗಲು ರಾತ್ರಿ ಎನ್ನದೆ ಹಾಟ್ ಸ್ಪಾಟ್ ಗಳಲ್ಲಿ ಮನೆ ಮನೆಗಳಿಗೆ, ರಸ್ತೆಗಳು, ಪಾರ್ಕ್​ಗಳು ಸೇರಿದಂತೆ ಸಂಪೂರ್ಣವಾಗಿ ಸ್ಯಾನಿಟೈಸ್​ ಮಾಡುತ್ತಿದ್ದಾರೆ.

Persistent sanitation in 21 hot spots in Tumkur city
ನಗರದ 21 ಹಾಟ್​​ಸ್ಪಾಟ್​ ಪ್ರದೇಶಗಳಲ್ಲಿ ನಿರಂತರ ಸ್ಯಾನಿಟೈಸ್

By

Published : May 1, 2021, 8:22 AM IST

Updated : May 1, 2021, 9:01 AM IST

ತುಮಕೂರು : ನಗರ ವ್ಯಾಪ್ತಿಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ 21 ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ನಿರಂತರವಾಗಿ ಸ್ಯಾನಿಟೈಸ್ ಮಾಡಲಾಗುತ್ತಿದೆ.

ನಗರದ 21 ಹಾಟ್​​ಸ್ಪಾಟ್​ ಪ್ರದೇಶಗಳಲ್ಲಿ ನಿರಂತರ ಸ್ಯಾನಿಟೈಸ್

ನಗರದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳಿರುವ ಪ್ರದೇಶಗಳನ್ನು ಹಾಟ್ ಸ್ಪಾಟ್​​ಗಳಾಗಿ ಗುರುತಿಸಿರೋ ಜಿಲ್ಲಾಡಳಿತ ಹೆಚ್ಚಿನ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುತ್ತಿದೆ.

ನಗರದ ಗೌಡರ ಬೀದಿ, ಗಾಂಧೀ ನಗರ, ಎಸ್ಐಟಿ ಲೇಔಟ್, ಎಸ್.ಎಸ್.ಪುರಂ, ವಿದ್ಯಾನಗರ, ವಿವೇಕಾನಂದ ನಗರ, ಪಿ.ಎಚ್. ಕಾಲೋನಿ, ಎಸ್ಐಟಿ(ಅಶೋಕ್ ನಗರ), ಪಿ.ಎನ್.ಆರ್.ಪಾಳ್ಯ, ಹೌಸಿಂಗ್ ಬೋರ್ಡ್, ಅರಳೀಮರದ ಪಾಳ್ಯ, ಬನಶಂಕರಿ ರಾಘವೇಂದ್ರ ನಗರ, ಮರಳೂರು ದಿಣ್ಣೆ, ರಾಜೀವ್ ಗಾಂಧಿನಗರ ಜೈಪುರ, ಗೋಕುಲ ಬಡಾವಣೆ, ಮಾರುತಿ ನಗರ, ನೃಪತುಂಗ ಬಡಾವಣೆ, ಜಯನಗರ ಸೌತ್, ಉಪ್ಪಾರಹಳ್ಳಿ ಮಸೀದಿ ರಸ್ತೆ ಹತ್ತಿರ, ಶ್ರೀರಾಮ್ ನಗರ, ಆದರ್ಶ ನಗರಗಳನ್ನು ಹಾಟ್ ಸ್ಪಾಟ್ ಪ್ರದೇಶವೆಂದು ಗುರುತಿಸಿ ಹೆಚ್ಚು ಕ್ರಮ ಕೈಗೊಳ್ಳಲಾಗಿದೆ.

ಓದಿ : ಕೊರೊನಾ ಸೋಂಕಿತರು ಮೃತಪಟ್ಟರೆ ಅಂತಹವರಿಗೆ ಉಚಿತ ಅಂತ್ಯಕ್ರಿಯೆ: ಹು -ಧಾ ಪಾಲಿಕೆ ನಿರ್ಧಾರ

Last Updated : May 1, 2021, 9:01 AM IST

For All Latest Updates

TAGGED:

ABOUT THE AUTHOR

...view details