ಕರ್ನಾಟಕ

karnataka

ETV Bharat / state

ತಾತನ ಅಂತ್ಯಸಂಸ್ಕಾರಕ್ಕೆ ದಾರಿ ಬಿಡದ ಮಳೆರಾಯ.. ಪ್ರಾಣದ ಹಂಗು ತೊರೆದು ನಡೆದು ಬಂದ ಬಾಣಂತಿ - Mother walked 1 km with newborn baby

ಮೃತಪಟ್ಟ ತಾತನ ಅಂತ್ಯಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿಯೊಬ್ಬರು ಮಗುವಿನೊಂದಿಗೆ 1 ಕಿಲೋ ಮೀಟರ್​ ದೂರ ನಡೆದು ಬರಬೇಕಾಯಿತು.

People scrambling for cremation in Tumakur
ಮಗುವಿನೊಂದಿಗೆ 12 ದಿನದ ಬಾಣಂತಿ

By

Published : Aug 29, 2022, 5:22 PM IST

ತುಮಕೂರು: ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ತುಂಬಿ‌ ಹರಿಯುತ್ತಿರುವ ಜಯಮಂಗಲಿ ನದಿಯ ಪ್ರವಾಹದಿಂದ ಸ್ಥಳೀಯರು ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡುವುದಕ್ಕೂ ಪರದಾಡುವಂತಾಗಿದೆ. ಮಧುಗಿರಿ ತಾಲೂಕಿನ ಗೌರೆಡ್ಡಿಪಾಳ್ಯದ ಗ್ರಾಮಸ್ಥರು ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ಪರದಾದುತ್ತಿದ್ದು, ಇವರ ಪಾಡು ಹೇಳ ತೀರದಾಗಿದೆ.

ಮಗುವಿನೊಂದಿಗೆ 12 ದಿನದ ಬಾಣಂತಿ

ಮಧುಗಿರಿ ತಾಲೂಕಿನ ಗೌರೆಡ್ಡಿ ಪಾಳ್ಯದಲ್ಲಿ ನಿವೃತ್ತ ಶಿಕ್ಷಕ ಸದಾಶಿವರೆಡ್ಡಿ ಎಂಬುವರು ಭಾನುವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು.‌ ನಿರಂತರ ಮಳೆಯಿಂದ ಹಾಗೂ ತುಂಬಿ ಹರಿಯುತ್ತಿರುವ ನದಿಯಿಂದ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ಇನ್ನಿಲ್ಲದ ಹರಸಾಹಸ ಪಡಬೇಕಾಯಿತು.

ಮಗುವಿನೊಂದಿಗೆ 12 ದಿನದ ಬಾಣಂತಿ

ಮೃತ ತಾತನ ಅಂತ್ಯ ಸಂಸ್ಕಾರ ನೆರವೇರಿಸಲು 12 ದಿನದ ಬಾಣಂತಿಯಾಗಿರುವ ಮೊಮ್ಮಗಳು ತಮ್ಮ ಮಗುವಿನೊಂದಿಗೆ 1 ಕಿಲೋ ಮೀಟರ್​ ದೂರವನ್ನು ಜಮೀನಿನ ಬದುಗಳಲ್ಲಿ ನಡೆದು ಬರಬೇಕಾಯಿತು. ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, ಸೂಕ್ತ ರಸ್ತೆ ಇಲ್ಲದೆ ಅಂತ್ಯಸಂಸ್ಕಾರ ನಡೆಸಲು ಇಂದಿಗೂ ಪರದಾಡುವಂತಹ ಪರಿಸ್ಥಿತಿ ಇದೆ.

ಮಗುವಿನೊಂದಿಗೆ 12 ದಿನದ ಬಾಣಂತಿ

ಸಂಬಂಧಿಕರು ಬಾಣಂತಿಯ ಕೈ ಹಿಡಿದುಕೊಂಡು ನದಿ ದಾಟಿದ್ದಾರೆ. ಇನ್ನು, ಬೆಳಗಾದರೆ ನಿತ್ಯ ಶಾಲಾ-ಕಾಲೇಜು ಹಾಗೂ ಡೈರಿಗೆ ಹಾಲು ಹಾಕಲು ದಿನಸಿ ತರಲು ಜಯಮಂಗಲಿ ನದಿ ದಡ ಅಥವಾ ನದಿ ಪಕ್ಕದ ಜಮೀನು ಆಶ್ರಯಿಸಬೇಕು. ಈ ರೀತಿ ನದಿ ಉಕ್ಕಿ ಬಂದಾಗ ವೃದ್ಧರು, ವಿದ್ಯಾರ್ಥಿಗಳು, ಮಹಿಳೆಯರು, ಗರ್ಭಿಣಿಯರು ಹಾಗೂ ರೋಗಿಗಳ ಯಾತನೆ ಕರಳು ಹಿಂಡಿಯುವಂತಿದೆ.

ಮಗುವಿನೊಂದಿಗೆ 12 ದಿನದ ಬಾಣಂತಿ

ಇದನ್ನೂ ಓದಿ:ಮೋದಿ ಒರಟು ವ್ಯಕ್ತಿ ಅಂದ್ಕೊಂಡಿದ್ದೆ, ಆದ್ರೆ ಅವ್ರಿಗೆ ಮಾನವೀಯತೆ ಇದೆ: ಗುಲಾಂ ನಬಿ ಆಜಾದ್

ABOUT THE AUTHOR

...view details