ಕರ್ನಾಟಕ

karnataka

ETV Bharat / state

ಶಿರಾದಲ್ಲಿ ಉಚಿತ ಹೆಲ್ಮೆಟ್​ಗೆ ಮುಗಿಬಿದ್ದ ಜನರು.. ಜನಸಾಗರ ಕಂಡು ಆಯೋಜಕರು ಎಸ್ಕೇಪ್​ - ಶಿರಾದಲ್ಲಿ ಉಚಿತ ಹೆಲ್ಮೆಟ್​ಗೆ ಮುಗಿಬಿದ್ದ ಜನರು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೆಡಿಎಸ್ ಅಧ್ಯಕ್ಷ ಉಗ್ರೇಶ್​​ ಎಂಬುವರು ಉಚಿತವಾಗಿ ಹೆಲ್ಮೆಟ್ ಗಳನ್ನು ವಿತರಿಸಿದ್ದು, ಈ ಸಂದರ್ಭ ಸಾರ್ವಜನಿಕರು ಉಚಿತ ಹೆಲ್ಮೆಟ್​​ ಪಡೆಯಲು ಮುಗಿಬಿದ್ದ ಘಟನೆ ನಡೆಯಿತು.

people-rushed-to-get-the-free-helmets-at-tumkur
ಉಚಿತ ಹೆಲ್ಮೆಟ್ ಪಡೆಯಲು ಮುಗಿಬಿದ್ದ ಜನರು : ಜನರನ್ನು ಕಂಡು ಸ್ಥಳದಿಂದ ಕಾಲ್ಕಿತ್ತ ಆಯೋಜಕರು

By

Published : Nov 20, 2022, 10:56 PM IST

ತುಮಕೂರು :ಶಿರಾ ತಾಲೂಕು ಜೆಡಿಎಸ್ ಅಧ್ಯಕ್ಷ ಉಗ್ರೇಶ್​​ ಎಂಬುವರು ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗೃತಿ ಮೂಡಿಸಲು ಉಚಿತವಾಗಿ ಹೆಲ್ಮೆಟ್ ಗಳನ್ನು ವಿತರಿಸುತ್ತಿದ್ದರು. ಈ ವೇಳೆ ಉಚಿತ ಹೆಲ್ಮೆಟ್​ಗಳನ್ನು ಪಡೆಯಲು ಜನರು ಮುಗಿಬಿದ್ದ ಘಟನೆ ಶಿರಾ ಪಟ್ಟಣದಲ್ಲಿ ನಡೆಯಿತು.

ಉಚಿತ ಹೆಲ್ಮೆಟ್ ಪಡೆಯಲು ಮುಗಿಬಿದ್ದ ಜನರು : ಜನರನ್ನು ಕಂಡು ಸ್ಥಳದಿಂದ ಕಾಲ್ಕಿತ್ತ ಆಯೋಜಕರು

ಶಿರಾ ಪಟ್ಟಣದ ಪ್ರವಾಸಿ ಮಂದಿರದ ಬಳಿ ಆಟೋದಲ್ಲಿ ಸುಮಾರು 500ಕ್ಕೂ ಹೆಚ್ಚು ಹೆಲ್ಮೆಟ್ ಗಳನ್ನು ಉಚಿತವಾಗಿ​​ ವಿತರಿಸುತ್ತಿದ್ದರು. ಈ ಬಗ್ಗೆ ತಿಳಿದ ಸಾರ್ವಜನಿಕರು ಹೆಲ್ಮೆಟ್ ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಇದರಿಂದಾಗಿ ಪ್ರವಾಸಿ ಮಂದಿರದ ವೃತ್ತದ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ :ತುಮಕೂರು : ಆರು ದಶಕಗಳ ನಂತರ ತುಂಬಿ ಹರಿಯುತ್ತಿದೆ ಜಯಮಂಗಲಿ ನದಿ

ABOUT THE AUTHOR

...view details