ಕರ್ನಾಟಕ

karnataka

ETV Bharat / state

ಕೋವಿಡ್ ಭೀತಿ: ರಕ್ತದಾನ ಮಾಡಲು ಜನರ ಹಿಂದೇಟು!

ಮೊದಲೆಲ್ಲಾ ತಾವಾಗಿಯೇ ಬಂದು ರಕ್ತದಾನ ಮಾಡುತ್ತಿದ್ದ ಜನರು ಕೋವಿಡ್​ ಭೀತಿಯಿಂದ ರಕ್ತದಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದು ಆರೋಗ್ಯ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಿದೆ.

ರಕ್ತದಾನ
ರಕ್ತದಾನ

By

Published : Jul 18, 2021, 11:45 AM IST

Updated : Jul 18, 2021, 1:53 PM IST

ತುಮಕೂರು: ಜಿಲ್ಲೆಯಲ್ಲಿ ರಕ್ತದ ಅಭಾವ ತಲೆದೋರಿದ್ದು, ರಕ್ತದಾನ ಮಾಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಕೋವಿಡ್​ನಿಂದ ಗುಣಮುಖರಾದವರು, ಲಸಿಕೆ ಪಡೆದವರು ಕೂಡ ರಕ್ತದಾನ ಮಾಡೋಕೆ ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು ಶೇಕಡಾ 40 ರಷ್ಟು ರಕ್ತದ ಕೊರತೆ ಇದೆ ಎಂದು ಅಂದಾಜಿಸಲಾಗಿದೆ.

ಕೋವಿಡ್ ಭೀತಿ: ರಕ್ತದಾನ ಮಾಡಲು ಜನರ ಹಿಂದೇಟು!

ಜಿಲ್ಲೆಯಲ್ಲಿ ರಕ್ತ ಸಂಗ್ರಹಕ್ಕಿಂತ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಷ್ಟಕರವಾಗುತ್ತಿದೆ. ಈ ಕೊರತೆ ಸರ್ಕಾರಿ ಆಸ್ಪತ್ರೆಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಾಗಿದೆ. ಕಾರಣ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೆಂಟರ್ ಮಾಡಿರೋದ್ರಿಂದ ಕೇವಲ ಹೆರಿಗೆ ಮತ್ತು ಸಣ್ಣಪುಟ್ಟ ಶಸ್ತ್ರಚಿಕಿತ್ಸೆ ಮಾತ್ರ ಮಾಡಲಾಗುತ್ತಿದೆ. ಇದರ ಪರಿಣಾಮ ಉಳಿದ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ಹಾಗಾಗಿ ಖಾಸಗಿ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಕಾಡುತ್ತಿದೆ. ಒಂದು ದಿನಕ್ಕೆ 15 ರಿಂದ 20 ಯುನಿಟ್ ರಕ್ತಕ್ಕೆ ಬೇಡಿಕೆ ಬಂದರೆ ಕೇವಲ 8 ರಿಂದ 10 ಯುನಿಟ್ ಮಾತ್ರ ಪೂರೈಕೆ ಮಾಡಲಾಗುತ್ತಿದೆ.

ನರ್ಸಿಂಗ್ ಹೋಂ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರಕ್ತಕ್ಕೆ ಅಪಾರ ಬೇಡಿಕೆಯಿದೆ. ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ.

ಜಿಲ್ಲೆಯಲ್ಲಿ ರಕ್ತದ ಅಭಾವ ಕಡಿಮೆ ಮಾಡಲು ಜಿಲ್ಲಾ ಆರೋಗ್ಯ ಇಲಾಖೆ ವಿವಿಧೆಡೆ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ. ಹೀಗೆಯೇ ರಕ್ತದ ಕೊರತೆ ಮುಂದುವರೆದರೆ ತುರ್ತು ಪರಿಸ್ಥಿತಿಯಲ್ಲಿ ಜನರ ಪ್ರಾಣ ಉಳಿಸುವುದು ಕಷ್ಟ ಕಷ್ಟ ಎನ್ನವಂತ ಸ್ಥಿತಿ ಎದುರಾಗಿದೆ.

ಇದನ್ನೂ ಓದಿ:ರೈತರಿಗೆ ಬಂಪರ್​.. ತಿಂಗಳಿಗೆ 1,000 ರೂ. ನೀಡುವ ಯೋಜನೆಗೆ ಸಿಎಂ ಗೆಹ್ಲೋಟ್ ಚಾಲನೆ

Last Updated : Jul 18, 2021, 1:53 PM IST

ABOUT THE AUTHOR

...view details