ಕರ್ನಾಟಕ

karnataka

ETV Bharat / state

ಆಗಸದಲ್ಲಿ ಶೂನ್ಯ ನೆರಳಿನ ಕೌತುಕ.. ಖಗೋಳ ವಿಸ್ಮಯಕ್ಕೆ ಸಾಕ್ಷಿಯಾದ ತುಮಕೂರು ಮಂದಿ - ಆಗಸದಲ್ಲಿಂದು ಶೂನ್ಯ ನೆರಳಿನ ಕೌತುಕ

ಲಾಕ್​ಡೌನ್ ಇರುವ ಹಿನ್ನೆಲೆ ವಿಜ್ಞಾನ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ಜನರು ತಮ್ಮ ಮನೆಯ ಬಳಿಯೇ ಸೂರ್ಯನ ಬೆಳಕಿಗೆ ನಿಂತು ಕೌತುಕ ವೀಕ್ಷಿಸಿದರು..

people-delighted-by-zero-shadow-day-in-tumkur
ಖಗೋಳ ವಿಸ್ಮಯಕ್ಕೆ ಸಾಕ್ಷಿಯಾದ ತುಮಕೂರು ಮಂದಿ

By

Published : Apr 24, 2021, 5:08 PM IST

Updated : Apr 24, 2021, 7:45 PM IST

ತುಮಕೂರು :ಇಂದು ಆಗಸದಲ್ಲಿ ಜರುಗುವ ಖಗೋಳ ವಿಸ್ಮಯ ಶೂನ್ಯ ನೆರಳಿನ ಕೌತುಕವನ್ನು ಸಾರ್ವಜನಿಕರು ಮತ್ತು ಮಕ್ಕಳು ಕಣ್ತುಂಬಿಕೊಂಡರು. ಸೂರ್ಯ ನಡು ನೆತ್ತಿಯ ಮೇಲಿದ್ದಾಗ 12.17ರ ವೇಳೆಯಲ್ಲಿ ಕೆಲ ಕ್ಷಣ ಯಾವುದೇ ವಸ್ತುವಿನ ನೆರಳು ಕಾಣಲಿಲ್ಲ.

ಖಗೋಳ ವಿಸ್ಮಯಕ್ಕೆ ಸಾಕ್ಷಿಯಾದ ತುಮಕೂರು ಮಂದಿ

ಶೂನ್ಯ ನೆರಳಿನ ದಿನ ಗಮನಿಸಲು ಯಾವುದೇ ಉಪಕರಣಗಳ ಬಳಕೆಯ ಅಗತ್ಯವಿಲ್ಲ. ಈ ಸಮಯದಲ್ಲಿ ಅವುಗಳ ನೆರಳು ಅಕ್ಕಪಕ್ಕ ಎಲ್ಲೂ ಬೀಳದಿರುವುದನ್ನು ಕಂಡು ಮಕ್ಕಳು ಅಚ್ಚರಿ ವ್ಯಕ್ತಪಡಿಸಿದರು. ಈ ಅಪರೂಪದ ಕ್ಷಣಗಳು ನಿಜಕ್ಕೂ ಸಾರ್ವಜನಿಕರಲ್ಲಿ ಕುತೂಹಲ ಹುಟ್ಟಿಸಿತ್ತು.

ಲಾಕ್​ಡೌನ್ ಇರುವ ಹಿನ್ನೆಲೆ ವಿಜ್ಞಾನ ಕೇಂದ್ರಗಳಿಗೆ ತೆರಳಲು ಸಾಧ್ಯವಾಗದ ಜನರು ತಮ್ಮ ಮನೆಯ ಬಳಿಯೇ ಸೂರ್ಯನ ಬೆಳಕಿಗೆ ನಿಂತು ಕೌತುಕ ವೀಕ್ಷಿಸಿದರು.

Last Updated : Apr 24, 2021, 7:45 PM IST

ABOUT THE AUTHOR

...view details