ಕರ್ನಾಟಕ

karnataka

ETV Bharat / state

ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ವರಿಷ್ಠರು ಅವಕಾಶ ಕೊಟ್ಟಿದ್ದಾರೆ: ನಿಖಿಲ್ ಕುಮಾರಸ್ವಾಮಿ - etv bharat kannada

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸುರೇಶ್ ಬಾಬು ಅವರನ್ನು ಅಧಿಕಾರಕ್ಕೆ ತರಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜನರಲ್ಲಿ ಮನವಿ ಮಾಡಿದ್ದಾರೆ.

Nikhil Kumaraswamy
ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ವರಿಷ್ಠರು ಅವಕಾಶ ಕೊಟ್ಟಿದ್ದಾರೆ: ನಿಖಿಲ್ ಕುಮಾರಸ್ವಾಮಿ

By

Published : Mar 17, 2023, 10:57 PM IST

Updated : Mar 17, 2023, 11:05 PM IST

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ

ತುಮಕೂರು:ಚಿಕ್ಕನಾಯಕನಹಳ್ಳಿ ಕ್ಷೇತ್ರದ ಹಾಲಿ ಶಾಸಕ ಹಾಗೂ ಮಂತ್ರಿಗಳಾದ ಮಾಧುಸ್ವಾಮಿ ಅವರ ನಡವಳಿಕೆಗಳನ್ನ ಇಡೀ ರಾಜ್ಯ ಗಮನಿಸುತ್ತಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಯುವ ಜೆಡಿಎಸ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಮನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ವರಿಷ್ಠರು ನನಗೆ ಅವಕಾಶ ಕೊಟ್ಟಿದ್ದಾರೆ ಎಂದರು.

ದೇವೇಗೌಡರಿಗೆ 90 ವರ್ಷ ಆಗಿದೆ. ಈಗಲೂ ನಾಡಿನ ರೈತರ ಬಗ್ಗೆ ಚಿಂತನೆ ಮಾಡುತ್ತಾರೆ. ನೀರಾವರಿ ಯೋಜನೆಗಳು ರಾಜ್ಯದಲ್ಲಿ ಸಂಪೂರ್ಣಗೊಳ್ಳಬೇಕು, ಜನತಾ ಜಲಧಾರೆ ಕಾರ್ಯಕ್ರಮ ಇತಿಹಾಸ ನಿರ್ಮಿಸಿದೆ. ಹೆಚ್​ ಡಿ ಕುಮಾರಸ್ವಾಮಿ ಅವರ ಏಕಾಂಗಿಯಾಗಿ ಪ್ರವಾಸ ಮಾಡುತ್ತಿದ್ದಾರೆ. ಹಾಸನ, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ನಿತ್ಯ 80 ರಿಂದ 100 ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದಾರೆ, ಇವತ್ತು ಕುಮಾರಸ್ವಾಮಿ ಅವರ ಮೇಲೆ ರಾಜ್ಯದ ಜನತೆ ವಿಶ್ವಾಸ ಇಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಮಂಡ್ಯ ಗೌಡರ ಬಗ್ಗೆ ಮುನಿರತ್ನಗೆ ಏನು ಗೊತ್ತು?: ಹೆಚ್​.ಡಿ.ಕುಮಾರಸ್ವಾಮಿ

ಈ ಕ್ಷೇತ್ರದಲ್ಲಿ ಸುರೇಶ್ ಬಾಬು ಅವರನ್ನ ಅಧಿಕಾರಕ್ಕೆ ತರಬೇಕು. ಈ ಬಾರಿ ಬಿಜೆಪಿಯನ್ನ 6 ಕೋಟಿ ಕನ್ನಡಿಗರು ದೂರ ಇಡಬೇಕೆಂಬ ಕೂಗು ಕೇಳಿ ಬರುತ್ತಿದೆ ಎಂದರು. ಪಂಚರತ್ನ ಕಾರ್ಯಕ್ರಮಗಳನ್ನ ಮನೆ ಮನೆಗೆ ತಲುಪಿಸುವ ಕೆಲಸ ಆಗುತ್ತಿದೆ. ಎಲ್ಲಾ ಸಮಾಜಗಳಿಗೆ ಪಂಚರತ್ನ ಯಾತ್ರೆ ಕಾರ್ಯಕ್ರಮಗಳು ತಲುಪಬೇಕು. ಈ ಕ್ಷೇತ್ರದಲ್ಲಿ ಎಲ್ಲ ವರ್ಗದ‌ ಜನ ಇದ್ದಾರೆ. ಈ ಬಾರಿ ಸುರೇಶ್ ಬಾಬು ಅವರನ್ನ ಕೈ ಹಿಡಿಯಬೇಕು ಎಂದು ನಿಖಿಲ್​ ಮನವಿ ಮಾಡಿದರು.

ಕುಮಾರಣ್ಣ ಅಧಿಕಾರಕ್ಕೆ ಬಂದರೆ ಕೊಬ್ಬರಿ ದರ 15 ಸಾವಿರಕ್ಕೆ ಏರಿಕೆ:ರಾಜ್ಯಾದಂತ್ಯ ಪಂಚರತ್ನ ಯಾತ್ರೆ ಸಾಗಿದೆ. ಯುವಕರು, ರೈತರು, ಹೆಣ್ಣುಮಕ್ಕಳು, ಸೇರಿದಂತೆ ಎಲ್ಲಾ ವರ್ಗದ ಜನ ಪಂಚರತ್ನ ಯಾತ್ರೆಗೆ ಬೆಂಬಲ ಕೊಡುತ್ತಿದ್ದಾರೆ. ಕೊಬ್ಬರಿ ದರ ಕುಸಿದಿದೆ, ಕುಮಾರಣ್ಣ ಅಧಿಕಾರಕ್ಕೆ ಬಂದರೆ ಕೊಬ್ಬರಿ ದರವನ್ನು 15 ಸಾವಿರಕ್ಕೆ ಏರಿಕೆ ಮತ್ತು ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡುತ್ತಾರೆ ಎಂದು ಭರವಸೆ ನೀಡಿದರು. ರಾಜ್ಯದಲ್ಲಿ ನಿರುದ್ಯೋಗ ಸೃಷ್ಟಿಯಾಗಿದೆ. ಲೂಟಿಕೋರರ ಕೈಯಲ್ಲಿ ಸರ್ಕಾರ‌ ಕೊಟ್ಟಿದ್ದೇವೆ ಅದನ್ನ‌ ಕಿತ್ತು ಹಾಕಬೇಕು ಎಂದು ಹೇಳಿದರು.

ಭಗೀರಥ ಸಮಾಜ ಹಾಗೂ ಯುವ ಜನತಾದಳ ಸಮಾವೇಶದಲ್ಲಿ ಕೆಲ ಕಾಲ ಗೊಂದಲ ನಿರ್ಮಾಣವಾಗಿತ್ತು. ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಸಮಾವೇಶಕ್ಕೆ ಬಂದಿದ್ದ ಜನರನ್ನ ಪೊಲೀಸರು ಚದುರಿಸಿದ ಘಟನೆ ನಡೆಯಿತು. ಈ ವೇಳೆ‌‌ ಮಾಜಿ ಶಾಸಕ ಸುರೇಶ್ ಬಾಬು ಮಧ್ಯೆ ಪ್ರವೇಶಿಸಿ, ಪೊಲೀಸರನ್ನು ಹಾಗೂ ಕಾರ್ಯಕರ್ತರನ್ನು ಶಾಂತಗೊಳಿಸಿದರು. ಇದನ್ನೆಲ್ಲ ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ಸುರೇಶ್ ಬಾಬು ಇದೇ ವೇಳೆ ಆರೋಪಿಸಿದರು.

ಇದನ್ನೂ ಓದಿ:ಬಿಜೆಪಿ ಸೃಷ್ಟಿಸಿದ ಉರಿಗೌಡ ನಂಜೇಗೌಡ ಹೆಸರಲ್ಲಿ ಸಿನಿಮಾ: ಮುನಿರತ್ನ ವಿರುದ್ಧ ಹೆಚ್​ಡಿಕೆ ಕಿಡಿ

Last Updated : Mar 17, 2023, 11:05 PM IST

ABOUT THE AUTHOR

...view details