ತುಮಕೂರು: ಕೊಳೆತ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಬಳಸಿ ಪಾನಿಪುರಿ ಮಾರುತ್ತಿದ್ದವನ ತಳ್ಳುಗಾಡಿಗೆ ಬೆಂಕಿ ಹೆಚ್ಚಿ ಯುವಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ತಿಪಟೂರು ನಗರದಲ್ಲಿ ನಡೆದಿದೆ.
ಪಾನಿಪುರಿ ಗಾಡಿಗೆ ಬೆಂಕಿ ಹಚ್ಚಿ ಆಕ್ರೋಶ.....ಯಾಕೆ ಗೊತ್ತಾ? - ಕೊಳೆತ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಬಳಸಿ ಪಾನಿಪುರಿ
ತಿಪಟೂರು ನಗರದ ಹಳೇಪಾಳ್ಯ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿ ತಿನ್ನುತ್ತಿದ್ದ ಮಕ್ಕಳ ಆರೋಗ್ಯದಲ್ಲಿ ನಿರಂತರ ವ್ಯತ್ಯಾಸವಾಗುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯ ಯುವಕರು ಪಾನಿಪೂರಿ ಮಾರುವವರನ್ನು ವಿಚಾರಿಸಿದ್ದಾರೆ. ಆಗ ಪಾನಿಪೂರಿ ಮಾರುವ ಬಳಸುತ್ತಿದ್ದ ಕೊಳೆತ ಈರುಳ್ಳಿ ಮತ್ತು ಆಲೂಗಡ್ಡೆ ಕಂಡು ಸ್ಥಳೀಯರು ಕೆಂಡಾಮಂಡಲರಾಗಿದ್ದು, ಏಕಾಏಕಿ ತಳ್ಳುವ ಗಾಡಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
![ಪಾನಿಪುರಿ ಗಾಡಿಗೆ ಬೆಂಕಿ ಹಚ್ಚಿ ಆಕ್ರೋಶ.....ಯಾಕೆ ಗೊತ್ತಾ?](https://etvbharatimages.akamaized.net/etvbharat/prod-images/768-512-4485668-thumbnail-3x2-jhkjhjjh.jpg)
ತಿಪಟೂರು ನಗರದ ಹಳೇಪಾಳ್ಯ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಮಾರಾಟ ಮಾಡಲಾಗುತ್ತಿದ್ದ ಪಾನಿಪುರಿ ತಿನ್ನುತ್ತಿದ್ದ ಮಕ್ಕಳ ಆರೋಗ್ಯದಲ್ಲಿ ನಿರಂತರ ವ್ಯತ್ಯಾಸವಾಗುತ್ತಿತ್ತಂತೆ ಈ ಹಿನ್ನೆಲೆ ಅನುಮಾನಗೊಂಡ ಸ್ಥಳೀಯ ಯುವಕರು ಪಾನಿಪೂರಿ ಮಾರುವವರನ್ನು ವಿಚಾರಿಸಿದ್ದಾರೆ. ಆಗ ಪಾನಿಪೂರಿ ಮಾರುವವ ಬಳಸುತ್ತಿದ್ದ ಕೊಳೆತ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಕಂಡು ಸ್ಥಳೀಯರು ಕೆಂಡಾಮಂಡಲರಾಗಿದ್ದು, ಏಕಾಏಕಿ ತಳ್ಳುವ ಗಾಡಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ.
ಯುವಕರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಂತಹ ಘಟನೆಗಳಿಂದಾಗಿ ಪಾನಿಪುರಿ ಪ್ರೀಯರು ರಸ್ತೆ ಬದಿಯ ತಿನಿಸುಗಳನ್ನ ತಿನ್ನುವ ಮೊದಲು ಮತ್ತೊಮ್ಮೆ ಯೋಚಿಸುವಂತೆ ಮಾಡುತ್ತಿದೆ.