ತುಮಕೂರು:ಜಿಲ್ಲೆಯ ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸಾಗುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರುತ್ತಿದ್ದಾರೆ. ಇಂದು ಹೆಚ್‌ಡಿಕೆ ಅವರಿಗೆ ಗ್ರಾಮದ ಜನರು ಸ್ಕೂಲ್ ಬ್ಯಾಗ್ಗಳನ್ನು ಬಳಸಿ ತಯಾರಿಸಲಾದ ವಿಶೇಷ ಹಾರ ಹಾಕಿದರು.
ಜೆಡಿಎಸ್ ಪಂಚರತ್ನ ರಥಯಾತ್ರೆ: ಸ್ಕೂಲ್ ಬ್ಯಾಗ್ ಹಾರ ಹಾಕಿ ಹೆಚ್‌ಡಿಕೆಗೆ ವಿಶೇಷ ಸ್ವಾಗತ - ಈಟಿವಿ ಭಾರತ ಕನ್ನಡ
ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಇಂದು ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಸಾಗಿತು.
ಜೆಡಿಎಸ್ ಪಂಚರತ್ನ ರಥಯಾತ್ರೆ
ಇದಾದ ಬಳಿಕ ಬೆಂಚೆ ಗ್ರಾಮದತ್ತ ಸಾಗಿದ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರುಬ ಸಮುದಾಯದ ಜನರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಕಂಬಳಿ ಹೊದಿಸಿ, ಕುರಿಮರಿಯನ್ನು ಅವರ ಹೆಗಲ ಮೇಲಿರಿಸಿ ಬರಮಾಡಿಕೊಂಡರು. ಹೆಚ್‌ಡಿಕೆ ಮೇಲೆ ರಚಿಸಿದ್ದ ಹಾಡುಗಳನ್ನು ಗ್ರಾಮಸ್ಥರು ಹಾಡಿದರು. ಜಿಲ್ಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಪಂಚರತ್ನ ರಥಯಾತ್ರೆ ನಿನ್ನೆಯಿಂದ ಮತ್ತೆ ಆರಂಭಗೊಂಡಿದೆ.
ಇದನ್ನೂ ಓದಿ:ತುಮಕೂರಿನಲ್ಲಿ ಪಂಚರತ್ನ ಯಾತ್ರೆ ಪುನಾರಂಭ: ಹೆಚ್‌ಡಿಕೆಗೆ ಹೂಮಳೆ, ಬೃಹತ್ ಸೇಬಿನ ಹಾರ