ತುಮಕೂರು: ನಾಳೆ ಪುನೀತ್ ರಾಜ್ಕುಮಾರ್ ಅವರ ಪ್ರಥಮ ಪುಣ್ಯಸ್ಮರಣೆಯಿದ್ದು ಧಾರವಾಡದಿಂದ ಬೆಂಗಳೂರಿಗೆ ಮಹಿಳೆಯೊಬ್ಬರು ಪಾದಯಾತ್ರೆ ಮಾಡುತ್ತಿದ್ದಾರೆ. ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸಮಾಧಿಗೆ ತುಮಕೂರು ಮೂಲಕ ಧಾರವಾಡದ ಮನಗುಂಡಿಯ ದಾಕ್ಷಾಯಿಣಿ ಪಾಟೀಲ್ ನಡೆದುಕೊಂಡೇ ಸಾಗಿ ಬರುತ್ತಿದ್ದಾರೆ.
ಕಳೆದ ವರ್ಷವೂ ಪಾದಯಾತ್ರೆಯ ಮೂಲಕ ತೆರಳಿ ಅಪ್ಪು ಸಮಾಧಿಗೆ ದಾಕ್ಷಾಯಿಣಿ ನಮನ ಸಲ್ಲಿಸಿದ್ದರು. ತಮ್ಮ ಮೂರು ತಿಂಗಳ ಮಗುವಿನೊಂದಿಗೆ ಪಾದಯಾತ್ರೆ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಸತತ ಮೂರು ವರ್ಷ ಪಾದಯಾತ್ರೆ ಮಾಡುವುದಾಗಿ ಹೇಳಿದ್ದ ದಾಕ್ಷಾಯಿಣಿ, ತಮ್ಮ ಮಾತಿನಂತೆಯೇ ಈ ವರ್ಷ ಮತ್ತೆ ಪಾದಯಾತ್ರೆ ಮಾಡುತ್ತಿದ್ದಾರೆ.