ತುಮಕೂರು:ಜಿಲ್ಲೆಯಲ್ಲಿ ಚಿರತೆ ಹಾವಳಿ ಜನರನ್ನು ಪ್ರಾಣಭೀತಿಗೆ ದೂಡಿದೆ. ಚಿರತೆ ಸೆರೆ ಹಿಡಿಯಲು ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ ಗ್ರಾಮದಲ್ಲಿ ಕೂಂಬಿಂಗ್ ನಡೆದಿದೆ. ಬನ್ನೇರುಘಟ್ಟ, ಬಂಡಿಪುರ, ನಾಗರಹೊಳೆಯ ವಿಶೇಷ ಅರಣ್ಯ ಪಡೆಯಿಂದ ಕೂಂಬಿಂಗ್ ಆರಂಭವಾಗಿದೆ. ಸ್ಪೆಷಲ್ ಟೈಗರ್ ಫೋರ್ಸ್ (ಎಸ್ಟಿಎಫ್)ನಿಂದ ಕಾರ್ಯಾಚರಣೆ ನಡೆದಿದ್ದು, ಹಗಲಿರುಳು ನರಭಕ್ಷಕ ಚಿರತೆ ಸೆರೆ ಹಿಡಿಯಲು ಪಣ ತೊಟ್ಟಿದ್ದಾರೆ.
ಕಳೆದ ಗುರುವಾರ ಬಾಲಕನನ್ನು ಬಲಿ ತೆಗೆದುಕೊಂಡಿದ್ದ ನರಭಕ್ಷಕ ಚಿರತೆ ಗುಬ್ಬಿ ತಾಲೂಕಿನಲ್ಲಿ ಓಡಾಡುತ್ತಿದೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿದೆ. ಹೀಗಾಗಿ ಗುಬ್ಬಿ ತಾಲೂಕಿನ ಮಣಿಕುಪ್ಪೆ, ದೊಡ್ಡಮಳವಾಡಿ, ಚಿಕ್ಕಮಳವಾಡಿ, ಸಿ.ಎಸ್ ಪುರ, ಹೆಬ್ಬೂರು ಸುತ್ತಮುತ್ತಲ ಪೊದೆಗಳು ಮತ್ತು ಮೀಸಲು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆದಿದೆ.