ಕರ್ನಾಟಕ

karnataka

ETV Bharat / state

ಸಹಜ ಬೇಸಾಯ ನೀತಿಗಳಿಗೆ ಒತ್ತಾಯಿಸಿ, ರಾಜ್ಯಾದ್ಯಂತ ಒಂದು ವರ್ಷ ಸತ್ಯಾಗ್ರಹ.. ಸಿ ಯತಿರಾಜು - ರಾಜ್ಯ ಸಂಚಾಲಕ ಸಿ. ಯತಿರಾಜು

ಗ್ರಾಮೀಣಾಭಿವೃದ್ಧಿ ಎಂದರೆ ಕೃಷಿ, ಕೃಷಿ ಇಲ್ಲದಿದ್ದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗುವುದಿಲ್ಲ. ಈ ಸಹಜ ಬೇಸಾಯ ನೀತಿಯ ಮೂಲಕ ಗ್ರಾಮ ಸ್ವರಾಜ್ಯ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಅಂಜು ಬಾಬಿ ಜಾರ್ಜ್ ಚಾಲನೆ ನೀಡಲಿದ್ದಾರೆ..

one-year-satyagraha-across-the-state-demanding-natural-farming-policies
ಸಹಜ ಬೇಸಾಯ ನೀತಿಗಳಿಗೆ ಒತ್ತಾಯಿಸಿ, ರಾಜ್ಯಾದ್ಯಂತ ಒಂದು ವರ್ಷ ಸತ್ಯಾಗ್ರಹ: ಸಿ.ಯತಿರಾಜು

By

Published : Sep 27, 2020, 5:59 PM IST

ತುಮಕೂರು: ನಮ್ಮ ಆರೋಗ್ಯ ಸರಿಯಾಗಿರಬೇಕೆಂದರೆ ನಮ್ಮ ಆಹಾರದ ಗುಣಮಟ್ಟ ಸರಿಯಾಗಿರಬೇಕು. ಕೋವಿಡ್-19ನಿಂದಾಗಿ ಹೆಚ್ಚು ಸಾವು ಸಂಭವಿಸಲು ಕಾರಣ ನಮ್ಮ ಆಹಾರದ ಪದ್ಧತಿ. ವಿಷಯುಕ್ತ ಆಹಾರವನ್ನು ವಿಷಮುಕ್ತ ಆಹಾರವನ್ನಾಗಿ ಮಾಡುವ ಮೂಲಕ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದು ಸಹಜ ಬೇಸಾಯ ಶಾಲೆಯ ರಾಜ್ಯ ಸಂಚಾಲಕ ಸಿ ಯತಿರಾಜು ತಿಳಿಸಿದರು.

ಸಹಜ ಬೇಸಾಯ ನೀತಿಗಳಿಗೆ ಒತ್ತಾಯಿಸಿ ರಾಜ್ಯಾದ್ಯಂತ ಒಂದು ವರ್ಷ ಸತ್ಯಾಗ್ರಹ..

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಜ ಬೇಸಾಯ ಶಾಲೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಅಕ್ಟೋಬರ್ 1ರಿಂದ ಒಂದು ವರ್ಷ ಕಾಲ ಸಹಜ ಬೇಸಾಯ ನೀತಿಗಳಿಗೆ ಒತ್ತಾಯಿಸಿ, ರಾಜ್ಯಾದ್ಯಂತ ಸಹಜ ಸತ್ಯಾಗ್ರಹ ಎಂಬ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಉದ್ದೇಶವೆಂದ್ರೆ ಸಹಜ ಬೇಸಾಯ ನೀತಿಗಳನ್ನು ಸರ್ಕಾರ ಅಂಗೀಕರಿಸಬೇಕು, ಜೊತೆಗೆ ಈಗಾಗಲೇ ಸಹಜ ಬೇಸಾಯದಲ್ಲಿ ತೊಡಗಿಕೊಂಡಿರುವವರ ಅಭಿಪ್ರಾಯಗಳನ್ನು ಸಂಗ್ರಹಿಸುವ ಕಾರ್ಯ. ಇವೆಲ್ಲವೂ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ರಚನಾತ್ಮಕ ಕಾರ್ಯಕ್ರಮವಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಎಂದರೆ ಕೃಷಿ, ಕೃಷಿ ಇಲ್ಲದಿದ್ದರೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗುವುದಿಲ್ಲ. ಈ ಸಹಜ ಬೇಸಾಯ ನೀತಿಯ ಮೂಲಕ ಗ್ರಾಮ ಸ್ವರಾಜ್ಯ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮಕ್ಕೆ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಅಂಜು ಬಾಬಿ ಜಾರ್ಜ್ ಚಾಲನೆ ನೀಡಲಿದ್ದಾರೆ ಎಂದರು.

ABOUT THE AUTHOR

...view details