ಕರ್ನಾಟಕ

karnataka

ETV Bharat / state

ಕಲ್ಪತರು ನಾಡಲ್ಲಿ ಮತ್ತೆ ಹರಿದ ನೆತ್ತರು: ಝಳಪಿಸಿದ ಲಾಂಗು-ಮಚ್ಚು! - ತುಮಕೂರಿನಲ್ಲಿ ಓರ್ವ ವ್ಯಕ್ತಿ ಕೊಲೆ

ಕಲ್ಪತರು ನಾಡಲ್ಲಿ ಮತ್ತೆ ನೆತ್ತರು ಹರಿದಿದೆ. ತುಮಕೂರಿನಲ್ಲಿ ಲಾಂಗು- ಮಚ್ಚುಗಳು ಝಳಪಿಸಿದ್ದು, ಓರ್ವ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ತುಮಕೂರಿನಲ್ಲಿ ಓರ್ವ ವ್ಯಕ್ತಿ ಕೊಲೆ

By

Published : Nov 7, 2019, 11:02 PM IST

ತುಮಕೂರು:ನಗರದ ಹೊರವಲಯದ ನಾಗಣ್ಣನ ಪಾಳ್ಯ ಬಳಿ ಗುಂಪೊಂದು ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ಓರ್ವ ಹತ್ಯೆಗೀಡಾಗಿದ್ದಾನೆ.

ಶಿರಾ ಗೇಟ್ ಬಡಾವಣೆಯ ನಿವಾಸಿ ಮಹಾಂತೇಶ್ ಮೃತ ವ್ಯಕ್ತಿ. ಮಹಾಂತೇಶ್ ಮತ್ತು ಮಂಜುನಾಥ್ ಬೈಕ್​ನಲ್ಲಿ ಅನಿಕೇತನ ಶಾಲೆ ಕಡೆಗೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಅಡ್ಡ ಹಾಕಿದ ಚಿನ್ನಿ ಎಂಬಾತ ಹಾಗೂ ಆತನ ಇಬ್ಬರು ಸಹಚರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡು ರಕ್ತಸ್ರಾವದಿಂದ ಬಳಲುತ್ತಿದ್ದ ಮಹಾಂತೇಶನನ್ನ ಚಿಕಿತ್ಸೆಗಾಗಿ ಸಿದ್ಧಗಂಗಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮಹಾಂತೇಶ ಸಾವಿಗೀಡಾಗಿದ್ದಾನೆ. ಎರಡು ಗುಂಪುಗಳ ಮಧ್ಯೆ ಇಟ್ಟಿಗೆ ಫ್ಯಾಕ್ಟರಿ ವ್ಯವಹಾರದ ವಿಚಾರದಲ್ಲಿ ಗಲಾಟೆ ನಡೆದಿತ್ತು. ಕೊಲೆಗೆ ಇದೇ ಕಾರಣವಿರಬಹುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details