ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ತುಮಕೂರಿನಲ್ಲಿರುವ ಘಟಕಕ್ಕೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನಾನ್ ಎಕ್ಸಿಕ್ಯೂಟಿವ್ ಕ್ರೇಡ್ ಹುದ್ದೆಗಳು ಇವಾಗಿವೆ. ನಾಲ್ಕು ವರ್ಷದವರೆಗೆ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಸಲಾಗುವುದು. ಒಟ್ಟು 41 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಎಚ್ಎಎಲ್ನಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಸೇರಿದಂತೆ ಒಟ್ಟು 41 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
- ಫಿಟ್ಟರ್ - 17
- ಎಲೆಕ್ಟ್ರಿಷಿಯನ್ - 5
- ಸ್ಟೋರ್ ಕ್ಲೆರಿಕಲ್/ ಕಾಮರ್ಸ್ ಅಸಿಸ್ಟಂಟ್/ ಆಡ್ಮಿನ್ ಅಸಿಸ್ಟ್ - 4
- ಅಕೌಂಟ್ಸ್ - 2
- ಸಿವಿಲ್ - 1
- ಟೆಕ್ನಿಷಿಯನ್ (ಎಲೆಕ್ಟ್ರಿಕಲ್) - 7
- ಟೆಕ್ನಿಷಿಯನ್ (ಮೆಕಾನಿಕಲ್ ) - 2
- ಅಸಿಸ್ಟಂಟ್ (ಐಟಿ) - 2
ವಿದ್ಯಾರ್ಹತೆ:
- ಫಿಟ್ಟರ್, ಎಲೆಕ್ಟ್ರಿಷಿಯನ್ಗೆ ಎಚ್ಎಎಲ್ ಇಂಡಿಯಾ ನಿಯಮ ಅನುಸಾರ ಹುದ್ದೆ ಅರ್ಹತೆ ಹೊಂದಿರಬೇಕು.
- ಸ್ಟೋರ್ ಕ್ಲರಿಕಲ್/ ಕಾಮರ್ಸ್ ಅಸಿಸ್ಟಂಟ್/ ಆಡ್ಮಿನ್ ಅಸಿಸ್ಟ್- ಬಿಎ, ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ, ಬಿಎಸ್ಡಬ್ಲ್ಯೂ, ಪದವಿಯನ್ನು ಹೊಂದಿರಬೇಕು
- ಅಕೌಂಟ್ಸ್: ಬಿಕಾಂ, ಪದವಿ ಹೊಂದಿರಬೇಕು
- ಟೆಕ್ನಿಷಿಯನ್: ಡಿಪ್ಲೊಮಾ ಪದವಿ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 28 ವರ್ಷ ಮೀರಿರಬಾರದು. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಪ. ಜಾ, ಪ. ಪಂ ಅಭ್ಯರ್ಥಿಗಳಿಗೆ 10 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ, ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನ ಮೂಲಕ ನಡೆಸಲಾಗುವುದು