ತುಮಕೂರು: ಬಾತ್ರೂಮ್ನಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿಯೊಬ್ಬಳು ತನ್ನ ಕರುಳ ಬಳ್ಳಿಯನ್ನು ಆಸ್ಪತ್ರೆಯ ಬಾತ್ರೂಮ್ ಟಬ್ನಲ್ಲಿ ಎಸೆದು ಪರಾರಿಯಾಗಿದ್ದಾಳೆ.
ಬಾತ್ರೂಮ್ ಟಬ್ನಲ್ಲಿ ನವಜಾತ ಶಿಶು ಪತ್ತೆ! - Tumkur Newborn Girl Baby Case
ಆಸ್ಪತ್ರೆಯಲ್ಲಿ ಹೆಣ್ಣು ನವಜಾತ ಶಿಶು ಪತ್ತೆಯಾಗಿದೆ. ಸುಮಾರು 8 ತಿಂಗಳ ನವಜಾತ ಶಿಶು ಇದಾಗಿದ್ದು ತಾಯಿಗೆ ಸಿಬ್ಬಂದಿ ಹಿಡಿಶಾಪ ಹಾಕಿದ್ದಾರೆ.
Tumkur Newborn Girl Baby Case
ಆಸ್ಪತ್ರೆಯ ಸಿಬ್ಬಂದಿ ಬಾತ್ರೂಮ್ ಸ್ವಚ್ಛಗೊಳಿಸಲು ಹೋದಾಗ ಮೃತ ನವಜಾತ ಶಿಶು ಪತ್ತೆಯಾಗಿದೆ. ಸುಮಾರು 8 ತಿಂಗಳ ನವಜಾತ ಶಿಶುವಾಗಿದ್ದು ತಾಯಿಗೆ ಸಿಬ್ಬಂದಿ ಹಿಡಿಶಾಪ ಹಾಕಿದ್ದಾರೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.