ತುಮಕೂರು:ತಾಯಿಯ ಎದೆ ಹಾಲಿನಲ್ಲೂ ಕೂಡ ಇಂದು ಫ್ಲೋರೈಡ್ ಇರುವ ಕಾರಣ 15 ಸಾವಿರಕ್ಕೂ ಹೆಚ್ಚು ವಿಶೇಷ ಚೇತನರ ಸಂಖ್ಯೆ ಬೆಳೆಯುತ್ತಿದೆ ಎಂದು ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಸೋಗುಡು ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
ತಾಯಿಯ ಎದೆ ಹಾಲಿನಲ್ಲೂ ಪ್ಲೋರೈಡ್ ಅಂಶ: ಅಧಿಕಗೊಳ್ಳುತ್ತಿರುವ ವಿಶೇಷ ಚೇತನರ ಸಂಖ್ಯೆ - floraid in breastfeed
ತಾಯಿಯ ಎದೆ ಹಾಲಿನಲ್ಲೂ ಕೂಡ ಇಂದು ಫ್ಲೋರೈಡ್ ಇರುವ ಕಾರಣ 15 ಸಾವಿರಕ್ಕೂ ಹೆಚ್ಚು ವಿಶೇಷ ಚೇತನರ ಸಂಖ್ಯೆ ಬೆಳೆಯುತ್ತಿದೆ ಎಂದು ತಾಲೂಕ್ ಪಂಚಾಯತ್ ಅಧ್ಯಕ್ಷರಾದ ಸೋಗುಡು ವೆಂಕಟೇಶ್ ವಿಷಾದ ವ್ಯಕ್ತಪಡಿಸಿದರು.
ಸೋಗುಡು ವೆಂಕಟೇಶ್
ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂತರ್ಜಲ ಮಟ್ಟ ಕುಸಿತದಿಂದ ಫ್ಲೋರೈಡ್ ಅಂಶ ಹೆಚ್ಚಿರುವ ಕಾರಣ ತಾಯಿಯ ಎದೆ ಹಾಲಿನಲ್ಲೂ ಕೂಡ ಪ್ಲೋರೈಡ್ ಅಂಶ ಇರುವುದರಿಂದ ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆಯ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಇನ್ನು ಶುದ್ದೀಕರಿಸಿದ ನೀರು ಮತ್ತು ಸೊಪ್ಪಿನ ಆಹಾರ, ಸಿ ಅನ್ನಾಂಗವಿರುವ ಹಣ್ಣುಗಳ ಸೇವನೆಯಿಂದ ಮಾತ್ರ ಫ್ಲೋರೋಸಿಸ್ ತಡೆಗಟ್ಟಲು ಸಾಧ್ಯವೆಂದು ತಿಳಿಸಿದ್ದಾರೆ.
Last Updated : Oct 16, 2019, 2:42 PM IST
TAGGED:
tumkur latest news