ತುಮಕೂರು:ನಗರದಕನ್ನಡ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ದಿ. ಡಾ. ಸೂಲಗಿತ್ತಿ ನರಸಮ್ಮ ಅವರ 99ನೇ ಹುಟ್ಟುಹಬ್ಬದ ಅಂಗವಾಗಿ ಸೂಲಗಿತ್ತಿ ನರಸಮ್ಮ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಿತು.
ಸೂಲಗಿತ್ತಿ ನರಸಮ್ಮ ಅವರ ಸ್ಮರಣಾರ್ಥ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಚಾರ. ನರಸಮ್ಮ ಅವರ ಸಮಾಜಮುಖಿ ಕಾರ್ಯ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾದದ್ದು. ಕೇವಲ ತುಮಕೂರು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ, ನೆರೆಯ ಆಂಧ್ರಪ್ರದೇಶದಲ್ಲಿ ಅವರ ಕಾರ್ಯಕ್ಕೆ ಗೌರವ ದೊರೆತಿದೆ. ಹಾಗಾಗಿಯೇ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಸಂಸದ ಜಿ ಎಸ್ ಬಸವರಾಜು ಬಣ್ಣಿಸಿದರು.