ತುಮಕೂರು:ಶ್ರೀ ಶಿವಕುಮಾರ ಸ್ವಾಮೀಜಿಯವರ 114ನೇ ಜನ್ಮದಿನೋತ್ಸವದ ಹಿನ್ನೆಲೆಯಲ್ಲಿ ಸಿದ್ದಗಂಗಾ ಮಠದಲ್ಲಿ 114 ಶಿಶುಗಳಿಗೆ ನಾಮಕರಣ ಮಹೋತ್ಸವ ಆಯೋಜಿಸಲಾಗಿತ್ತು.
ತುಮಕೂರು ಸಿದ್ದಗಂಗಾ ಮಠದಲ್ಲಿ 114 ಮಕ್ಕಳಿಗೆ ನಾಮಕರಣ ಮಹೋತ್ಸವ - Tumkur Siddaganga matha
ತುಮಕೂರು ಸಿದ್ದಗಂಗಾ ಮಠದಲ್ಲಿ 114 ಮಕ್ಕಳಿಗೆ ನಾಮಕರಣ ಮಾಡಲಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಂತಹ ಪೋಷಕರು ತಮ್ಮ ಮಕ್ಕಳಿಗೆ ಮಠದಲ್ಲಿ ಹೆಸರಿಟ್ಟು ಖುಷಿಪಟ್ಟರು.
ತುಮಕೂರು ಸಿದ್ದಗಂಗಾ ಮಠದಲ್ಲಿ 114 ಮಕ್ಕಳಿಗೆ ನಾಮಕರಣ
‘ಶಿ’ ಎಂಬ ಪ್ರಾರಂಭಿಕ ಅಕ್ಷರದಲ್ಲಿ ನಾಮಕರಣ ಮಾಡಲಾಯಿತು. ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿದ್ದ ನಾಮಕರಣ ಮಹೋತ್ಸವದಲ್ಲಿ ಭಾಗವಹಿಸಿದ್ದ ಶಿಶುಗಳಿಗೆ ಹೊಸದಾಗಿ ತೊಟ್ಟಿಲು ಹಾಸಿಗೆ ಹಾಗೂ ಸ್ವಾಮೀಜಿಯವರ ಭಾವಚಿತ್ರವನ್ನು ವಿತರಿಸಲಾಗಿದೆ.