ತುಮಕೂರು: ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಸರಿಯಾಗಿ ಮಳೆಯಾಗದ ಕಾರಣ ಉತ್ತಮ ಮಳೆಗಾಗಿ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ ನಡೆಯಿತು.
ಮಳೆಗಾಗಿ ಕೆರೆಯಲ್ಲಿ ನಿಂತು ನಮಾಜ್ - Namaz Standing in the Lake,
ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಸರಿಯಾಗಿ ಮಳೆಯಾಗದ ಕಾರಣ ತುಮಕೂರು ಜಿಲ್ಲೆ ದೊಡ್ಡ ಅಗ್ರಹಾರ ಗ್ರಾಮದ ಮುಸಲ್ಮಾನರು ಕೆರೆಯಲ್ಲಿ ನಿಂತು ನಮಾಜ್ ಮಾಡುವ ಮೂಲಕ ಉತ್ತಮ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಮಳೆಗಾಗಿ ಕೆರೆಯಲ್ಲಿ ನಿಂತು ನಮಾಜ್ ಮಾಡಿದ ಮುಸ್ಲಿಂ ಬಾಂಧವರು
ಜಿಲ್ಲೆಯ ಶಿರಾ ತಾಲೂಕಿನ ದೊಡ್ಡ ಅಗ್ರಹಾರ ಗ್ರಾಮದ ಮುಸ್ಲಿಂ ಬಾಂಧವರು ಕೆರೆಯಲ್ಲಿ ನಿಂತು ನಮಾಜ್ ಮಾಡುವ ಮೂಲಕ ಉತ್ತಮ ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಮಾತನಾಡಿ, ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ ಇದುವರೆಗೆ ಮಳೆ ಹನಿ ಭೂಮಿಗೆ ತಲುಪಿಲ್ಲ. ಇದರಿಂದಾಗಿ ನಾಡಿನಲ್ಲಿ ಬರದ ಛಾಯೆ ಮೂಡಿದೆ. ಪ್ರಕೃತಿಗೆ ಯಾವುದೇ ಜಾತಿ, ಧರ್ಮವಿಲ್ಲ. ಆ ದೇವರು ಕರುಣೆಯ ನೋಟ ಬೀರಿದರೆ ದೇಶ ಸುಭಿಕ್ಷವಾಗಲು ಕ್ಷಣ ಸಾಕು ಎಂದರು.