ತುಮಕೂರು: ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಸೋಂಕಿನಿಂದ ಮೃತಪಟ್ಟ ಬಹುತೇಕ ಮಂದಿಯ ಶವಗಳನ್ನು ಅವರ ಧರ್ಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಿದ್ದ ತಂಡ ಈ ಬಾರಿಯು ಸದ್ದಿಲ್ಲದೇ ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಸೋಂಕಿತ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡುತ್ತಿರುವ ಮುಸ್ಲಿಂ ಯುವಕರು ತಾಜುದ್ದೀನ್ ಶರೀಫ್ ನೇತೃತ್ವದಲ್ಲಿ 30 ಜನರಿದ್ದು, ತಲಾ 15 ಮಂದಿಯ 2 ತಂಡಗಳಾಗಿ ಶವಸಂಸ್ಕಾರ ನೆರವೇರಿಸುತ್ತಿದ್ದಾರೆ.
ಇದನ್ನು ಓದಿ:ಇಂತಹ ಕಠಿಣ ಆರ್ಥಿಕ ಸಂಕಷ್ಟದ ಮಧ್ಯೆಯೂ ಬಿಎಸ್ವೈ ಸರ್ಕಾರ ಮಾಡಿದ ಪ್ರಚಾರದ ಜಾಹೀರಾತು ಖರ್ಚು ಎಷ್ಟು ಗೊತ್ತಾ?
ಜಿಲ್ಲೆಯಲ್ಲಿ ಯಾರೇ ಕರೆದರೂ ತಕ್ಷಣ ಹೋಗಿ ಸೋಂಕಿತರ ಶವಗಳನ್ನು ಕೋವಿಡ್ ನಿಯಮಗಳ ಅನುಸಾರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಈ ತಂಡಕ್ಕೆ ಜಿಲ್ಲಾಡಳಿತದಿಂದ ಹಾಗೂ ಜಿಲ್ಲಾಸ್ಪತ್ರೆಯಿಂದ ಪಿಪಿಇ ಕಿಟ್ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಹಕಾರ ನೀಡಲಾಗುತ್ತಿದೆ.