ತುಮಕೂರು:ಕೊರೊನಾ ಭೀತಿಯಿಂದಾಗಿ ನಗರ ಪ್ರದೇಶದಿಂದ ಗ್ರಾಮಗಳಿಗೆ ವಾಪಸ್ ಬಂದಿರುವಂತಹ ಕೂಲಿ ಕಾರ್ಮಿಕರಿಗೆ ಜಾಬ್ಕಾರ್ಡ್ ಮೂಲಕ ಕೆಲಸ ನೀಡಬೇಕೆಂದು ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಆಗ್ರಹಿಸಿದ್ದಾರೆ.
ಗ್ರಾಮಗಳಿಗೆ ವಾಪಾಸ್ ಆಗಿರುವ ಕಾರ್ಮಿಕರಿಗೆ ಕೆಲಸ ಕೊಡಿ: ಮುರುಳೀಧರ ಹಾಲಪ್ಪ ಆಗ್ರಹ - latest tumkur news
ತುಮಕೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ ಅವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ, ನಗರಗಳಿಂದ ವಾಪಸ್ ಗ್ರಾಮಗಳಿಗೆ ಬಂದಿರುವ ಕಾರ್ಮಿಕರಿಗೆ ಜಾಬ್ ಕಾರ್ಡ್ಮೂಲಕ ಕೆಲಸ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ ಅವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗ, ನಗರದಿಂದ ಗ್ರಾಮಗಳಿಗೆ ಬಂದಿರುವ ಕಾರ್ಮಿಕರಿಗೆ ಕೆಲಸ ಕೊಡಿ. ಮತ್ತು ನರೇಗಾ ಯೋಜನೆಯಲ್ಲಿ 275 ರೂ. ಕೂಲಿ ಹಣದ ಬದಲಾಗಿ 375 ರೂ. ನೀಡಬೇಕು. 200 ದಿನಗಳ ಕೂಲಿ ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಬೇಕಿದೆ. ಹೀಗಾಗಿ ಶಾಲೆಗಳಲ್ಲಿ ಶೌಚಾಲಯದ ದುರಸ್ತಿಗೆ ಗಮನಹರಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.